ಭಾರತ, ಫೆಬ್ರವರಿ 26 -- ಸದ್ಯ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ (ICC Champions Trophy) ನಿರತರಾಗಿರುವ ಟೀಮ್‌ ಇಂಡಿಯಾ ಕ್ರಿಕೆಟಿಗರು, ಮುಂದಿನ ತಿಂಗಳು ಐಪಿಎಲ್‌ ಅಖಾಡಕ್ಕೆ ಇಳಿಯಲಿದ್ದಾರೆ. ಆ ನಂತರ ಭಾರತ ಕ್ರಿಕೆಟ್ ತಂಡದ ಅಂತಾರಾಷ್ಟ್ರೀಯ ವೇಳಾಪಟ್ಟಿಯು ಇಂಗ್ಲೆಂಡ್ ಪ್ರವಾಸದೊಂದಿಗೆ ಆರಂಭವಾಗಲಿದೆ. ಹೀಗಾಗಿ ಐಪಿಎಲ್ ಟೂರ್ನಿಯ ಸಮಯದಲ್ಲಿ ಟೀಮ್‌ ಇಂಡಿಯಾ ಆಟಗಾರರು ಬಿಳಿ ಚೆಂಡಿನ ಜೊತೆಗೆ ಕೆಂಪು ಚೆಂಡಿನೊಂದಿಗೂ ಬೆರೆಯಬೇಕಾದ ಅನಿವಾರ್ಯತೆ ಇದೆ. ಇದಕ್ಕೆ ಕಾರಣವೂ ಇದೆ. ಐಪಿಎಲ್ 2025ರ ಆವೃತ್ತಿ ಮುಗಿದ ನಂತರ, ಭಾರತ ತಂಡವು ಜೂನ್-ಜುಲೈ ತಿಂಗಳಲ್ಲಿ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲು ಇಂಗ್ಲೆಂಡ್‌ಗೆ ತೆರಳಬೇಕಿದೆ. ಹೀಗಾಗಿ ಅಗತ್ಯ ಸಿದ್ದತೆ ಬಿಸಿಸಿಐ ಯೋಜಿಸಿದೆ ಎನ್ನಲಾಗಿದೆ.

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡ ಸರಣಿ ಸೋತು ತವರಿಗೆ ಮರಳಿತ್ತು. ಆ ನಂತರ ಎಲ್ಲಾ ಭಾರತೀಯ ಆಟಗಾರರು ದೇಶೀಯ ಕ್ರಿಕೆಟ್ ಆಡುವುದು ಕಡ್ಡಾಯವಾಗಿದೆ. ಇದರ ಪರಿಣಾಮವಾಗಿ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರ...