ಭಾರತ, ಮಾರ್ಚ್ 14 -- ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಇತರ ಕ್ರಿಕೆಟ್ ಮಂಡಳಿಗಳಿಗೆ ಮಿಲಿಯನ್ ಡಾಲರ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್​ ಬಹಿಷ್ಕರಿಸುವಂತೆ ಪಾಕಿಸ್ತಾನ ತಂಡದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಅವರು ಮನವಿ ಮಾಡಿದ್ದಾರೆ. ಇತರ ಕ್ರಿಕೆಟ್ ಮಂಡಳಿಗಳು ತಮ್ಮ ಆಟಗಾರರನ್ನು ಐಪಿಎಲ್​ಗೆ ಕಳುಹಿಸುವುದನ್ನು ನಿಲ್ಲಿಸಬೇಕು ಎಂದು ದಿಗ್ಗಜ ಕ್ರಿಕೆಟಿಗ ವಿಷಕಾರಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತನ್ನ ಆಟಗಾರರನ್ನು ವಿದೇಶಿ ಟಿ20 ಲೀಗ್​​ಗಳಿಗೆ ಕಳುಹಿಸುವುದಿಲ್ಲ. ಆದರೆ ನೀವು ಏಕೆ ಕಳುಹಿಸುತ್ತೀರಿ. ಭಾರತ ತಂಡದ ಆಟಗಾರರನ್ನು ಕಳುಹಿಸುವ ತನಕ ಇತರ ಮಂಡಳಿಗಳು ಸಹ ಕಠಿಣ ನಿಲುವನ್ನು ತೆಗೆದುಕೊಳ್ಳಬೇಕು. ತಮ್ಮ ಆಟಗಾರರನ್ನೂ ಐಪಿಎಲ್​ಗೆ ಕಳುಹಿಸಬಾರದು. ಬಿಸಿಸಿಐ ಕೂಡ ಸರಿ ದಾರಿಗೆ ಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿದೇಶಿ ಲೀಗ್​​ಗಳಲ್ಲಿ ಆಡಲು ಬಿಸಿಸಿಐ ಭಾರತದ ಪುರುಷ ಕ್ರಿಕೆಟಿಗರನ್ನು ಕಳುಹಿಸಲ್ಲ. ಆದರೆ ಮಹಿಳೆ ಕ್ರಿಕೆಟಿಗರಿಗೆ ವಿದೇಶಿ ಲೀಗ್ ಆಡಲು ಅವಕಾಶ ...