ಭಾರತ, ಮಾರ್ಚ್ 27 -- ಬ್ಯಾಟಿಂಗ್‌ಗೆ ಇಳಿದರೆ ಸಾಕು ಒಬ್ಬರ ನಂತರ ಮತ್ತೊಬ್ಬರಂತೆ ಅಬ್ಬರಿಸುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು, ಲಕ್ನೋ ಸೂಪರ್‌ ಜೈಂಟ್ಸ್‌ ಬೌಲಿಂಗ್‌ ವಿರುದ್ಧ ತುಸು ಅಬ್ಬರ ಕಡಿಮೆ ಮಾಡಿತು. ಎಲ್‌ಎಸ್‌ಜಿ ವೇಗಿಗಳ ಬೌಲಿಂಗ್‌ ದಾಳಿ ಖರಾರುವಕ್‌ ಆಗಿತ್ತು. 230ಕ್ಕೂ ಅಧಿಕ ರನ್‌ ಫಿಕ್ಸ್‌ ಎಂಬ ಪಂದ್ಯದಲ್ಲಿ, ಆತಿಥೇಯ ಎಸ್‌ಆರ್‌ಎಚ್‌ ತಂಡ 190 ರನ್‌ಗಳಿಗೆ ಸೀಮಿತವಾಯ್ತು. ಹೈದರಾಬಾದ್‌ನಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಎಸ್‌ಆರ್‌ಎಚ್‌ ಹಾಗೂ ಎಲ್‌ಎಸ್‌ಜಿ ತಂಡಗಳು ಮುಖಾಮುಖಿಯಾದವು. ಪಂದ್ಯದಲ್ಲಿ ಲಕ್ನೋ ತಂಡದ ಹೊಸ ಪ್ರತಿಭೆ ಪ್ರಿನ್ಸ್‌ ಯಾದವ್‌ ಕೇಂದ್ರಬಿಂದುವಾದರು.

ಐಪಿಎಲ್ 2025ರ ಆವೃತ್ತಿಯ ಮೊದಲ ಪಂದ್ಯದಲ್ಲಿ ಬೃಹತ್‌ ಮೊತ್ತ ಗಳಿಸಿದರೂ ಸೋತಿದ್ದ ಲಕ್ನೋ, ಎರಡನೇ ಪಂದ್ಯದಲ್ಲಿ ಮತ್ತೆ ಸೋಲಲು ಸಿದ್ಧವಿರಲಿಲ್ಲ. ಈ ಪಂದ್ಯದಲ್ಲಿ ತಂಡದ ನಾಯಕ ರಿಷಭ್ ಪಂತ್, ಹೊಸ ಅಸ್ತ್ರವನ್ನು ಬಳಸಿದರು. ಪ್ರತಿ ಬಾರಿ ಎಸ್‌ಆರ್‌ಎಚ್‌ ತಂಡದ ಪಂದ್ಯದಲ್ಲಿ ಎದುರಾಳಿಗಳನ್ನು ಹೆಚ್ಚು ಕಾಡುವುದು ಟ್ರಾವಿಸ್‌ ಹೆಡ್.‌ ಇವರನ...