ಭಾರತ, ಏಪ್ರಿಲ್ 27 -- ಸದ್ಯ ಟೀಮ್‌ ಇಂಡಿಯಾ ಆಟಗಾರರು ಐಪಿಎಲ್‌ನಲ್ಲಿ ನಿರತರಾಗಿದ್ದಾರೆ. ಇದೇ ವೇಳೆ ವಿವಿಧ ದೇಶಗಳ ಪ್ರಬಲ ಆಟಗಾರರು ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಅತ್ತ ಪಾಕಿಸ್ತಾನದಲ್ಲಿ ಐಪಿಎಲ್‌ನಂತೆಯೇ ಪಿಎಸ್‌ಎಲ್‌ ಟೂರ್ನಿ ನಡೆಯುತ್ತಿದೆ. ಇದು ಮುಗಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ ಮತ್ತೆ ಆರಂಭವಾಗಲಿದೆ. ಭಾರತ ಕ್ರಿಕೆಟ್‌ ತಂಡ ಕೂಡಾ ವಿವಿಧ ಸರಣಿ ಹಾಗೂ ಟೂರ್ನಿಯಲ್ಲಿ ಆಡಲಿದೆ. ಐಪಿಎಲ್‌ ಪಂದ್ಯಾವಳಿಯು ಮೇ 25ರಂದು ಮುಗಿಯಲಿದೆ. ಫೈನಲ್‌ ಪಂದ್ಯದ ನಂತರ ಆಟಗಾರರು ಕೆಲವು ದಿನಗಳ ವಿಶ್ರಾಂತಿ ಪಡೆದು, ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಲಿದ್ದಾರೆ.

ಐಪಿಎಲ್‌ಗಿಂತ ಮುಂಚೆ ಭಾರತ ಕ್ರಿಕೆಟ್‌ ತಂಡವು ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಅಜೇಯ ಅಭಿಯಾನ ನಡೆಸಿ ಚಾಂಪಿಯನ್‌ ಪಟ್ಟ ಅಲಂಕರಿಸಿತು. ಅದಾದ ಬಳಿಕ ಐಪಿಎಲ್‌ ಪಂದ್ಯಾವಳಿ ಆರಂಭವಾಯ್ತು. ಟೂರ್ನಿ ಮುಗಿದ ಬಳಿಕ 2025ರ ಕ್ರಿಕೆಟ್‌ ಪಂದ್ಯಗಳ ಉಳಿದ ವೇಳಾಪಟ್ಟಿಯ ಪ್ರಕಾರ ಆಡಲಿದೆ.

ಈ ಅವಧಿಯಲ್ಲಿ ಏಷ್ಯಾಕಪ್ ಟೂರ್ನಿ ಕೂಡಾ ನಡೆಯಲಿದೆ. ಇದರೊಂದಿಗೆ, ಇಂಗ್ಲೆಂ...