ಭಾರತ, ಮಾರ್ಚ್ 15 -- 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೂ ಮುನ್ನ ಬಹುತೇಕ ತಂಡಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್​ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿಗೆ ಗುಡ್​ನ್ಯೂಸ್ ಸಿಕ್ಕಿದೆ. ಸ್ಟಾರ್ ಕ್ರಿಕೆಟಿಗರಾದ ಜೋಶ್ ಹೇಜಲ್‌ವುಡ್ (ಆರ್​ಸಿಬಿ), ಪ್ಯಾಟ್ ಕಮಿನ್ಸ್, ನಿತೀಶ್ ಕುಮಾರ್ ರೆಡ್ಡಿ (ಎಸ್​ಆರ್​​ಹೆಚ್), ಸಂಜು ಸ್ಯಾಮ್ಸನ್ (ಆರ್​ಆರ್​), ಮತ್ತು ಮಿಚೆಲ್ ಸ್ಟಾರ್ಕ್ (ಡಿಸಿ) ಮುಂಬರುವ ಐಪಿಎಲ್​ ಋತುವಿಗೆ ಫಿಟ್ ಆಗಿದ್ದಾರೆ ಎಂದು ವರದಿಯಾಗಿದೆ.

ಗಾಯಗೊಂಡಿದ್ದ ಇಂಗ್ಲೆಂಡ್​ ತಂಡದ ಸ್ಪೋಟಕ ಬ್ಯಾಟರ್ ಜೇಕಬ್​ ಬೆಥೆಲ್ ಕೂಡ ಐಪಿಎಲ್​ನಿಂದ ಹೊರಬೀಳಲಿದ್ದಾರೆ ಎನ್ನಲಾಗಿತ್ತು. ಇದೀಗ ಆತನೂ ಫಿಟ್ ಆಗಿದ್ದು, ಈಗಾಗಲೇ ಆರ್​ಸಿಬಿ ತಂಡವನ್ನೂ ಸೇರಿಸಿಕೊಂಡಿದ್ದಾರೆ. ಆ ಮೂಲಕ ಆರ್​ಸಿಬಿ ಫ್ಯಾನ್ಸ್​ಗೆ ಗುಡ್​ನ್ಯೂಸ್​ ನೀಡಿದ್ದಾರೆ. ಇದರ ಬೆನ್ನಲ್ಲೇ ಬೆನ್ನಲ್ಲೇ ಹೇಜಲ್​ವುಡ್ ಚೇತರಿಕೆ ಆರ್‌ಸಿಬಿಗೆ ಮತ್ತೊಂದು ಸಕಾರಾತ್ಮಕ ಬೆಳವಣಿಗೆಯಾ...