Bengaluru, ಮೇ 4 -- ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಐಪಿಎಲ್ ಪಂದ್ಯದ ಟಿಕೆಟ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಶುಕ್ರವಾರ ಬಂಧಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಡುವಿನ ಪಂದ್ಯದ 32 ಟಿಕೆಟ್‌ಗಳೊಂದಿಗೆ ಎಸ್. ಚರಣ್ ರಾಜ್, ಎಚ್. ಹರ್ಷವರ್ಧನ್ ಸಂಕ್ಲೇಚಾ, ಕೆ. ವಿನಯ್ ಮತ್ತು ಬಿ. ವೆಂಕಟ ಸಾಯಿ ಎಂಬುವವರನ್ನು ಬಂಧಿಸಿದೆ.
ವರದಿಯ ಪ್ರಕಾರ, 1,200 ರೂ.ಗಳ ಟಿಕೆಟ್‌ಗಳನ್ನು ತಲಾ 10,000 ರೂಪಾಯಿಗೆ ಮರು ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಇದರಲ್ಲಿ ವೆಂಕಟ ಸಾಯಿ ಎಂಬಾತ ಪ್ರಮುಖನಾಗಿದ್ದ ಎಂದು ಹೇಳಲಾಗಿದ್ದು ಈತನೇ ಬೃಹತ್ ಹಂಚಿಕೆ ಜಾಲದ ರೂವಾರಿಯಾಗಿದ್ದ. ಚರಣ್ ರಾಜ್ ಬಂಧನದೊಂದಿಗೆ ಕಾರ್ಯಾಚರಣೆ ಪ್ರಾರಂಭಿಸಿದ ಪೊಲೀಸರು ಆತ ನೀಡಿದ ಸುಳಿವಿನಂತೆ ಉಳಿದ ಆರೋಪಿಗಳನ್ನು ಬಂಧಿಸಿದ್ದಾರೆ. ಇವರ ಬಳಿ ಇದ್ದ ನಗದು ಮತ್ತು ಮೊಬೈಲ್ ಫೋನ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.