Bangalore, ಮಾರ್ಚ್ 17 -- ತಮ್ಮ ಕ್ರಿಕೆಟ್ ಅಭಿಮಾನಿಗಳಿಗೆ ಚೆನ್ನೈ ಸೂಪರ್ ಕಿಂಗ್ಸ್​ ಶುಭ ಸುದ್ದಿಯೊಂದನ್ನು ನೀಡಿದೆ. ಐದು ಬಾರಿಯ ಚಾಂಪಿಯನ್ ಸಿಎಸ್​ಕೆ (CSK) ತನ್ನ ತವರಿನಲ್ಲಿ ನಡೆಯುವ ಐಪಿಎಲ್ ಪಂದ್ಯಗಳಲ್ಲಿ ಅಭಿಮಾನಿಗಳಿಗೆ ವಿಶೇಷ ಆಫರ್ ನೀಡಿದೆ. ಅಭಿಮಾನಿಗಳಿಗೆ ಸೌಕರ್ಯಗಳನ್ನು ಹೆಚ್ಚಿಸುವ ಸಲುವಾಗಿ ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ (CMRL) ಮತ್ತು ಮೆಟ್ರೋಪಾಲಿಟನ್ ಸಾರಿಗೆ ನಿಗಮ (MTC) ಜೊತೆ ಮಾಡಿಕೊಂಡ ವಿಶೇಷ ಒಪ್ಪಂದವನ್ನು ಸಿಎಸ್​ಕೆ ಘೋಷಿಸಿದೆ. ಸಿಎಂಆರ್​ಎಲ್ ಜೊತೆಗಿನ ಪಾಲುದಾರಿಕೆಯಲ್ಲಿ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಜರುಗುವ ಪಂದ್ಯದ ಟಿಕೆಟ್‌ಗಳನ್ನು ಹೊಂದಿರುವ ಅಭಿಮಾನಿಗಳು ಮೆಟ್ರೋ ರೈಲಿನಲ್ಲಿ ಮತ್ತು ಬಸ್​ನಲ್ಲಿ ಉಚಿತವಾಗಿ ಪ್ರಯಾಣ ಬೆಳೆಸಬಹುದು.

ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಕ್ರಿಕೆಟ್ ಅಭಿಮಾನಿಗಳು ಸರತಿ ಸಾಲಿನಲ್ಲಿ ಕಾಯುವ ಅವಶ್ಯಕತೆ ಇಲ್ಲ. ಕ್ಯೂಆರ್ ಕೋಡ್ ಹೊಂದಿರುವ ಪಂದ್ಯದ ಟಿಕೆಟ್‌ಗಳನ್ನು ಬಸ್ ಮತ್ತು ಮೆಟ್ರೋದಲ್ಲಿ ಪ್ರಯಾಣಿಸಲು ನೆರವಾಗುವಂ...