ಭಾರತ, ಮಾರ್ಚ್ 22 -- ಐಪಿಎಲ್ 18ನೇ ಆವೃತ್ತಿ ಅದ್ಧೂರಿ ಆರಂಭಕ್ಕೆ ಸಜ್ಜಾಗಿದೆ. ಪ್ರತಿವರ್ಷವೂ ಬಿಸಿಸಿಐ ಟೂರ್ನಿಯಲ್ಲಿ ಹೊಸತನ, ಹೊಸ ನಿಯಮ, ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುತ್ತಿದೆ. ಈ ಬಾರಿ ಕೂಡಾ ಅತಿ ದೊಡ್ಡ ಮಟ್ಟದಲ್ಲಿ ಟೂರ್ನಿ ನಡೆಯಲಿದ್ದು, ಸುಧಾರಿತ ಡಿಜಿಟಲ್ ವೈಶಿಷ್ಟ್ಯಗಳು ಇರಲಿದೆ. ನೇರಪ್ರಸಾರದಲ್ಲಿ ಹೆಚ್ಚಿನ ವಿಶೇಷ ಇರಲಿದೆ. ಈ ಬಾರಿ ಐಪಿಎಲ್‌ ಲೈವ್‌ ಸ್ಟ್ರೀಮಿಂಗ್‌ ಉಚಿತವಾಗಿ ಇರುವುದಿಲ್ಲ. ಜಿಯೋ ಹಾಟ್‌ಸ್ಟಾರ್‌ ಅಪ್ಲಿಕೇಶನ್‌ನಲ್ಲಿ ಚಂದಾದಾರರಾಗಿ ಪಂದ್ಯ ನೋಡಬಹುದು. ಬಿಸಿಸಿಐ ಈ ಬಾರಿಯೂ ವಿವಿಧ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡುತ್ತಿದ್ದು, ಪ್ರತ್ಯೇಕವಾಗಿ ವೀಕ್ಷಕ ವಿವರಣೆ ನೀಡುತ್ತಿದೆ.

ಮಾರ್ಚ್ 22ರಂದು ಟೂರ್ನಿ ಆರಂಭವಾಗುತ್ತಿದೆ. ಪಂದ್ಯಾವಳಿಯ 18ನೇ ಸೀಸನ್‌ಗೆ ಮುಂಚಿತವಾಗಿ, ಜಿಯೋಸ್ಟಾರ್ ಲೀನಿಯರ್ ಟೆಲಿವಿಷನ್ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ 12 ಭಾಷೆಗಳಲ್ಲಿ ಪಂದ್ಯದ ಪ್ರಸಾರಕ್ಕೆ ಸಜ್ಜಾಗಿದೆ. ಐಪಿಎಲ್‌ ಪಂದ್ಯದ ವೇಳೆ ಕಾಮೆಂಟರಿ, ಪ್ರೆಸೆಂಟೇಷನ್‌ಗೆಂದು ಐಪಿಎಲ್ ಚಾಂಪಿಯನ್‌ಗಳು, ...