ಭಾರತ, ಮಾರ್ಚ್ 23 -- IPL 2025: ಭಾರತದ ಉದ್ದಗಲಕ್ಕೂ ಐಪಿಎಲ್‌ ಕ್ರಿಕೆಟ್ ಪಂದ್ಯಗಳ ಜ್ವರ ಕಾವೇರತೊಡಗಿದೆ. ಐಪಿಎಲ್‌ ಸೀಸನ್ ನಿನ್ನೆ (ಮಾರ್ಚ್ 22) ಶುರುವಾಗಿದ್ದು, ಮೇ 25ರ ತನಕ ನಡೆಯಲಿದೆ. ಈ ನಡುವೆ, ಬೆಟ್ಟಿಂಗ್ ಆಪ್‌ಗಳ ಪ್ರಮೋಟ್ ಮಾಡುವುದಕ್ಕೆ ಸೆಲೆಬ್ರಿಟಿಗಳು ಜಾಹೀರಾತಿನಲ್ಲಿ ಭಾಗವಹಿಸಿದ್ದನ್ನು ಗಮನಿಸಿ ಅವರ ವಿರುದ್ಧ ಕ್ರಮಕ್ಕೆ ಆಂಧ್ರ ಪ್ರದೇಶ ಸರ್ಕಾರ ಮುಂದಾಗಿದೆ. ಟಾಲಿವುಡ್ ಸೆಲೆಬ್ರಿಟಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇವೆಲ್ಲದರ ನಡುವೆ ಕರ್ನಾಟಕದಲ್ಲಿ ಹುಬ್ಬಳ್ಳಿ ಪೊಲೀಸರು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಶೇರ್ ಮಾಡಿದ ಬೆಟ್ಟಿಂಗ್ ಆಡಬೇಡಿ ಎಂದು ಸಂದೇಶ ಸಾರುವ ಸಾದಾ ಸೀದಾ ಲೋಕಲ್‌ ವಿಡಿಯೋ ಬಹಳ ಜನರ ಗಮನಸೆಳೆದಿದೆ. ನಾನಾ ರೀತಿ ಪ್ರತಿಕ್ರಿಯೆಗಳು ಅಲ್ಲಿ ವ್ಯಕ್ತವಾಗಿದ್ದು, ಐಪಿಎಲ್ ಎಂಜಾಯ್ ಮಾಡಿ, ಬೆಟ್ಟಿಂಗ್ ಆಡಬೇಡಿ ಅಂತ ಸೆಲೆಬ್ರಿಟಿಗಳ ಕೈಲೇ ಪ್ರಚಾರ ಮಾಡ್ಸಿ ಎಂಬ ಸಲಹೆ ಮಾತ್ರ ಮಾರ್ಮಿಕವಾಗಿ ಕಂಡುಬಂತು.

ಐಪಿಎಲ್ ಸೀಸನ್‌ನ ಮೊದಲ ಮ್ಯಾಚ್ ಶುರುವಾಗುವುದಕ್ಕೂ ಮೊದಲು, ಹುಬ್ಬಳ್ಳಿ ಪೊಲೀ...