Bengaluru, ಏಪ್ರಿಲ್ 5 -- ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಸೋಲು ಕಂಡಿತು. ಕೊನೆಯ ಓವರ್‌ನಲ್ಲಿ ತಂಡದಿಂದ ಗುರಿ ತಲುಪಲು ಸಾಧ್ಯವಾಗಲಿಲ್ಲ. ಪಂದ್ಯದಲ್ಲಿ ತಿಲಕ್‌ ವರ್ಮಾ ರಿಟೈರ್ಡ್‌ ಔಟ್‌ ಆದರು. ಮುಂಬೈ ಇಂಡಿಯನ್ಸ್‌ ತಂಡಕ್ಕೆ ಡೆತ್‌ ಓವರ್‌ನಲ್ಲಿ ದೊಡ್ಡ ಹೊಡೆತಗಳ ಅಗತ್ಯವಿತ್ತು. ಆದರೆ ತಿಲಕ್‌ ವರ್ಮಾಗೆ ಅದು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅವರು ರಿಟೈರ್ಡ್‌ ಔಟ್‌ (retired out) ಆಗಿ ಪೆವಿಲಿಯನ್‌ಗೆ ನಡೆದರು. ಆ ಮೂಲಕ ಐಪಿಎಲ್‌ ಇತಿಹಾಸದಲ್ಲಿ ರಿಟೈರ್ಡ್‌ ಔಟ್‌ ಆದ ಕೇವಲ ನಾಲ್ಕನೇ ಆಟಗಾರ ಎನಿಸಿಕೊಂಡರು.

ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು ಮುಂಬೈ ಮಾಡಿದ ತಂತ್ರ ಹೊರತಾಗಿಯೂ 12 ರನ್‌ಗಳ ಸೋಲು ಕಾಣಬೇಕಾಯ್ತು. ತಿಲಕ್ ವರ್ಮಾ ಅವರನ್ನು ಪಂದ್ಯದ ಕೊನೆಯ ಹಂತದಲ್ಲಿ ರಿಟೈರ್ಡ್ ಔಟ್ ಮಾಡಿರುವುದು ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ಟಿ20 ಶತಕಗಳನ್ನು ಸಿಡಿಸಿರ...