Bangalore, ಮಾರ್ಚ್ 17 -- ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್​ ಲೀಗ್​ (IPL 2025) ಆರಂಭಕ್ಕೂ ಮುನ್ನವೇ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ತಂಡದ ಸ್ಟಾರ್ ವೇಗಿ ಉಮ್ರಾನ್ ಮಲಿಕ್ (Umran Malik) ಗಾಯದ ಕಾರಣದಿಂದ ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಉಮ್ರಾನ್ ಮಲಿಕ್ ಅವರನ್ನು ಕೆಕೆಆರ್ 75 ಲಕ್ಷ ರೂ.ಗೆ ಖರೀದಿಸಿತ್ತು. ಈ ಹಿಂದೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದ ಉಮ್ರಾನ್ ಅವರ ಬದಲಿ ಆಟಗಾರನನ್ನೂ ಕೆಕೆಆರ್ ಘೋಷಿಸಿದೆ.

ಉಮ್ರಾನ್ ಸ್ಥಾನಕ್ಕೆ ಎಡಗೈ ವೇಗಿ ಚೇತನ್ ಸಕಾರಿಯಾ ಅವರನ್ನು ಆಯ್ಕೆ ಮಾಡಲಾಗಿದೆ. ಸಕಾರಿಯಾ ಭಾರತ ಪರವೂ ಆಡಿದ್ದು, ಒಂದು ಏಕದಿನ ಮತ್ತು ಎರಡು ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಇದಲ್ಲದೆ, ಐಪಿಎಲ್​ನಲ್ಲೂ 19 ಪಂದ್ಯಗಳಲ್ಲಿ ಆಡಿದ್ದು, 20 ವಿಕೆಟ್‌ ಉರುಳಿಸಿ ಗಮನ ಸೆಳೆದಿದ್ದಾರೆ. 27 ವರ್ಷದ ಸಕರಿಯಾ ಕಳೆದ ವರ್ಷ ಕೆಕೆಆರ್​ ಫ್ರಾಂಚೈಸಿ ಭಾಗವಾಗಿದ್ದರು. ಆದರೆ, ಪ್ರಶಸ್ತಿ ಗೆದ್ದ ಕೋಲ್ಕತ್ತಾ ಗೆಲುವಿನ ಅಭಿಯಾನದ ಯಾವುದೇ ಪಂದ್ಯದಲ್ಲ...