ಭಾರತ, ಮಾರ್ಚ್ 20 -- ಐಪಿಎಲ್ 2025ರ ಸೀಸನ್ ಇನ್ನೂ ಆರಂಭವಾಗಿಲ್ಲ. ಆದರೆ ಕೆಲವು ತಂಡಗಳ ಅಬ್ಬರದಾಟ ಆಗಲೇ ಶುರುವಾಗಿದೆ. ಹೆಚ್ಚಿನ ತಂಡಗಳ ಆಟಗಾರರು ರೋಚಕ ಪಂದ್ಯಾವಳಿಗಾಗಿ ಭರ್ಜರಿ ತಯಾರಿಯಲ್ಲಿದ್ದಾರೆ. ತಂಡದ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಮತ್ತು ಫಾರ್ಮ್ ಕಂಡುಕೊಳ್ಳಲು ಹಲವು ಆಟಗಾರರು ಜಿದ್ದಿಗೆ ಬಿದ್ದಿದ್ದಾರೆ. ಈ ನಡುವೆ ಆಟಗಾರರ ತೀವ್ರತೆಯ ಆಟಕ್ಕೆ ಸ್ಟೇಡಿಯಂನ ವಸ್ತುಗಳಿಗೆ ಕೂಡಾ ಹಾನಿಯಾಗುತ್ತಿವೆ. ಕಳೆದ ಆವೃತ್ತಿಯ ಐಪಿಎಲ್‌ನ ರನ್ನರ್‌ ಅಪ್‌ ತಂಡ ಸನ್‌ರೈಸರ್ಸ್ ಹೈದರಾಬಾದ್‌ (Sunrisers Hyderabad), ಈಗಾಗಲೇ ಬಿರುಸಿನ ಸಿದ್ಧತೆ ನಡೆಸುತ್ತಿದೆ. ತಂಡದಲ್ಲಿ ಸ್ಫೋಟಕ ಬ್ಯಾಟರ್‌ಗಳ ದೊಡ್ಡ ಪಡೆಯೇ ಇದ್ದು, ತಂಡದ ಬೌಲರ್‌ಗಳನ್ನು ಬೆವರಿಳಿಸುವಂತೆ ಮಾಡಿದೆ. ಇದಕ್ಕೊಂದು ಉತ್ತಮ ಉದಾಹರಣೆ ಇಲ್ಲಿದೆ.

ಹೈದರಾಬಾದ್‌ ಸ್ಟೇಡಿಯಂನಲ್ಲಿ ಎಸ್‌ಆರ್‌ಎಚ್‌ ತಂಡದ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ. ಸ್ಫೋಟಕ ಬ್ಯಾಟರ್‌ ಅಭಿಷೇಕ್ ಶರ್ಮಾ (Abhishek Sharma), ಈ ಬಾರಿ ಕೂಡಾ ಸಿಡಿಯುವ ಸುಳಿವು ನೀಡಿದ್ದಾರೆ. ಇವರ ಅಬ್ಬರಕ್...