Bengaluru, ಮೇ 10 -- ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್ 2025 ಅನ್ನು ಒಂದು ವಾರ ಅಮಾನತುಗೊಳಿಸಲಾಗಿದೆ ಎಂದು ಬಿಸಿಸಿಐ ಅಧಿಕೃತ ಹೇಳಿಕೆ ನೀಡಿದೆ. ಇದೀಗ ಪಾಯಿಂಟ್ಸ್ ಟೇಬಲ್, ಆರೆಂಜ್ ಕ್ಯಾಪ್, ಪರ್ಪಲ್​ ಕ್ಯಾಪ್ ಮತ್ತು ಪಂದ್ಯಾವಳಿಯ ಕೆಲವು ದಾಖಲೆಗಳನ್ನು ನೋಡೋಣ.

ಈವರೆಗಿನ ಅಂಕಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ನಂ.1 ಸ್ಥಾನದಲ್ಲಿದೆ. ಆರ್​​ಸಿಬಿ, ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಕ್ರಮವಾಗಿ 2. 3, 4ನೇ ಸ್ಥಾನದಲ್ಲಿದೆ.

ಸದ್ಯಕ್ಕೆ ಮುಂಬೈ ಇಂಡಿಯನ್ಸ್ ಆಟಗಾರ ಸೂರ್ಯಕುಮಾರ್ ಯಾದವ್ ಬಳಿ ಆರೆಂಜ್ ಕ್ಯಾಪ್ ಇದೆ. ಮುಂಬೈ ಇಂಡಿಯನ್ಸ್ ಪರ 12 ಪಂದ್ಯಗಳನ್ನಾಡಿರುವ ಇವರು 510 ರನ್ ಗಳಿಸಿದ್ದಾರೆ. ಸಾಯಿ ಸುದರ್ಶನ್ 509 ರನ್ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ. ಶುಭ್ಮನ್ ಗಿಲ್ (508), ವಿರಾಟ್ ಕೊಹ್ಲಿ (505) ಮತ್ತು ಜೋಸ್ ಬಟ್ಲರ್ (500) ಅಗ್ರ ಐದು ಸ್ಥಾನಗಳಲ್ಲಿದ್ದಾರೆ.

ಗುಜರಾತ್ ಟೈಟಾನ್ಸ್​​​ನ ಪ್ರಸಿದ್ಧ್ ಕೃಷ್ಣ ಪರ್ಪಲ್ ಕ್ಯಾಪ್ ಹೊಂದ...