ಭಾರತ, ಮಾರ್ಚ್ 19 -- ಮಾರ್ಚ್‌ 22ರಂದು ಐಪಿಎಲ್‌ 18ನೇ ಆವೃತ್ತಿ ಆರಂಭವಾಗುತ್ತದೆ. ಮಾರ್ಚ್ 23ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಗಳು ಎದುರಾಗಲಿವೆ. ಮೊದಲ ಪಂದ್ಯದಲ್ಲಿ ಎಂಐ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಕಳೆದ ವರ್ಷ ಪುನರಾವರ್ತಿತ ನಿಧಾನಗತಿಯ ಓವರ್ ರೇಟ್ ತಪ್ಪಿನಿಂದಾಗಿ ತಂಡದ ನಿಯಮಿತ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಒಂದು ಪಂದ್ಯದಿಂದ ನಿಷೇಧಿಸಲಾಗಿದೆ. ಹೀಗಾಗಿ ಈ ಬಾರಿ ಮುಂಬೈ ಇಂಡಿಯನ್ಸ್ ತಂಡದ ಋತುವಿನ ಆರಂಭಿಕ ಪಂದ್ಯದಿಂದಲೇ ಹಾರ್ದಿಕ್‌ ಬ್ಯಾನ್‌ ಆಗಿದ್ದಾರೆ. ಹೀಗಾಗಿ ಸೂರ್ಯ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ.

ಕಳೆದ ವರ್ಷ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ 2024ರ ಕೊನೆಯ ಪಂದ್ಯದಲ್ಲಿ ಎಂಐ ತಂಡವು ನಿಗದಿತ ಸಮಯಕ್ಕೆ ಅಗತ್ಯ ಓವರ್ ರೇಟ್‌ನಿಂದ ಹಿಂದಿತ್ತು. ಕಳೆದ ವರ್ಷ ತಂಡದಿಂದ ಅದು ಮೂರನೇ ಬಾರಿ ನಡೆದ ಪುನರಾವರ್ತಿತ ತ...