ಭಾರತ, ಮಾರ್ಚ್ 23 -- Shah Rukh Khans on ILP 2025 Opening Ceremony: ಕಿಂಗ್ ಖಾನ್‌ ಎಂದೇ ಕರೆಸಿಕೊಳ್ಳುವ ಬಾಲಿವುಡ್ ನಟ ಶಾರುಖ್ ಖಾನ್‌ ಪ್ರಪಂಚದಾದ್ಯಂತ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ಐಪಿಎಲ್‌ 2025ರ ಉದ್ಘಾಟನಾ ಸಮಾರಂಭದಲ್ಲಿ ಶಾರುಖ್‌ ನಡೆಯು ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಮಾರ್ಚ್ 22 ರಂದು ಕೋಲ್ಕತ್ತಾದ ಈಡನ್‌ ಗಾರ್ಡನ್‌ ಮೈದಾನದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನ ಉದ್ಘಾಟನಾ ಸಮಾರಂಭವಿತ್ತು. ಈ ಕಾರ್ಯಕ್ರಮಕ್ಕೆ ಶಾರುಖ್‌ ಖಾನ್ ಬಂದಿದ್ದು ಮಾತ್ರವಲ್ಲ, ಕಾರ್ಯಕ್ರಮದ ನಿರೂಪಣೆ ಕೂಡ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಕಾರ್ಯಕ್ರಮ ಶ್ರೇಯಾಘೋಷಾಲ್‌, ದಿಶಾ ಪಟಾನಿ ಸೇರಿ ಸಿನಿತಾರೆಯರ ಬಳಗವು ಸಾಕಷ್ಟು ಮನರಂಜನೆ ನೀಡಿತ್ತು. ಆದರೆ ನಿನ್ನೆಯ ಕಾರ್ಯಕ್ರಮದಲ್ಲಿ ಈ ಎಲ್ಲದಕ್ಕಿಂತಲೂ ಗಮನ ಸೆಳೆದಿದ್ದು, ರಾಷ್ಟ್ರಗೀತೆಯ ಸಮಯದಲ್ಲಿನ ಶಾರುಖ್ ನಡೆ.

ರಾಷ್ಟ್ರಗೀತೆಗೆ ಶಾರುಖ್ ತೋರಿರುವ ಗೌರವ ಹಾಗೂ ಅವರಿಗಿರುವ ರಾಷ್ಟ್ರಪ್ರೇಮದ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ...