ಭಾರತ, ಮಾರ್ಚ್ 30 -- ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ (ಮಾ.29) ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾದವು. ಪಂದ್ಯದಲ್ಲಿ ಎಂಐ ಪರ ಸತ್ಯನಾರಾಯಣ ರಾಜು ಆಡಿದರು. ತಮ್ಮ ಎರಡನೇ ಐಪಿಎಲ್ ಪಂದ್ಯದಲ್ಲಿ ಅವರು ಹೊಸ ಹಾಗೂ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ. ಆದರೆ, ಇದು ಖುದ್ದು ರಾಜು ಅವರಿಗೂ ಅನಿರೀಕ್ಷಿತ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನಿಧಾನಗತಿಯ ಎಸೆತವೊಂದನ್ನು ಬೌಲ್ ಮಾಡಿದ್ದಾರೆ.
ಆಂಧ್ರಪ್ರದೇಶದ 25 ವರ್ಷದ ವೇಗದ ಬೌಲರ್, ಗುಜರಾತ್ ಟೈಟಾನ್ಸ್ ಇನ್ನಿಂಗ್ಸ್ ವೇಳೆ ಜೋಸ್ ಬಟ್ಲರ್ ಅವರಿಗೆ ಎಸೆತದಲ್ಲಿ ಈ ಸನ್ನಿವೇಶ ನಡೆದಿದೆ. ಇನ್ನಿಂಗ್ಸ್‌ನ 13ನೇ ಓವರ್‌ನಲ್ಲಿ ಬ್ಯಾಕ್-ಆಫ್-ದಿ-ಹ್ಯಾಂಡ್ ವ್ಯತ್ಯಾಸದೊಂದಿಗೆ ಬೌಲಿಂಗ್ ಮಾಡಿದಾಗ ಅದು ನಿಧಾನಗತಿಯಲ್ಲಿ ಸಾಗಿ ಬಟ್ಲರ್ ಬ್ಯಾಟ್‌ಗೆ ಕನೆಕ್ಟ್ ಆಗಿದೆ.
ಈ ಓವರ್‌ನಲ್ಲಿ ನಿಧಾನಗತಿಯ ಎಸೆತವನ್ನು ಹೊರತುಪಡಿಸಿ, ಓವರ್‌ನ ಇತರ ಎಲ್ಲಾ ಎಸೆತಗಳ ವೇಗವನ್ನು ಸ್ಪೀಡ್ ಗನ್ ದಾಖಲಿಸಿತು....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.