ಭಾರತ, ಏಪ್ರಿಲ್ 4 -- ಮುಂಬೈ ಇಂಡಿಯನ್ಸ್‌ ವಿರುದ್ಧ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ರೋಚಕ ಜಯ ಸಾಧಿಸಿದೆ. ಲಾಸ್ಟ್‌ ಓವರ್‌ ಥ್ರಿಲ್ಲರ್‌ ಪಂದ್ಯದಲ್ಲಿ ಮುಂಬೈಗೆ ಗೆಲ್ಲಲು ಆವಕಾಶ ನೀಡದ ಆತಿಥೇಯ ಲಕ್ನೋ, ಪ್ರಸಕ್ತ ಆವೃತ್ತಿಯಲ್ಲಿ ಆಡಿದ ನಾಲ್ಕು ಪಂದ್ಯಗಳಿಂದ ಎರಡನೇ ಜಯ ಸಾಧಿಸಿದೆ. ಅತ್ತ ಮುಂಬೈ ತಂಡವು ಟೂರ್ನಿಯಲ್ಲಿ ಮೂರನೇ ಸೋಲು ಎದುರಿಸಿದೆ. ಹಾರ್ದಿಕ್‌ ಪಾಂಡ್ಯ 5 ವಿಕೆಟ್‌ ಗೊಂಚಲು ನಡುವೆಯೂ, ಡೆತ್‌ ಓವರ್‌ಗಳಲ್ಲಿ ಲಕ್ನೋ ಬೌಲರ್‌ಗಳ ಖರಾರುವಕ್‌ ದಾಳಿ ಎದುರಿಸಲು ವಿಫಲವಾದ ಎಂಐ ಟೂರ್ನಿಯಲ್ಲಿ ಸೋಲಿನ ಅಭಿಯಾನ ಮುಂದುವರೆಸಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಎಲ್‌ಎಸ್‌ಜಿ 8 ವಿಕೆಟ್‌ ಕಳೆದುಕೊಂಡು 203 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಎಂಐ, 5 ವಿಕೆಟ್‌ ಕಳೆದುಕೊಂಡು 191 ರನ್‌ ಗಳಿಸಿತು. ಇದರೊಂದಿಗೆ ಲಕ್ನೋ ತಂಡ 12 ರನ್‌ಗಳ ರೋಚಕ ಜಯ ಸಾಧಿಸಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಆರಂಭಿಕರಾದ ಮಿಚೆಲ್‌ ಮಾರ್ಷ್‌ ಹಾಗೂ ಐಡೆನ್...