ಭಾರತ, ಮಾರ್ಚ್ 22 -- ಇಂಡಿಯನ್ ಪ್ರೀಮಿಯರ್ ಲೀಗ್‌ ಹೊಸ ಆವೃತ್ತಿ ಇವತ್ತಿನಿಂದ (ಮಾರ್ಚ್ 22) ಆರಂಭ. ಹಾಲಿ ಚಾಂಪಿಯನ್ ಕೆಕೆಆರ್ ಮತ್ತು ಆರ್‌ಸಿಬಿ ನಡುವೆ ಈಡನ್ ಗಾರ್ಡನ್ಸ್‌ನಲ್ಲಿ ಉದ್ಘಾಟನಾ ಪಂದ್ಯವು ನಡೆಯಲಿದೆ. ವರ್ಣರಂಜಿತ ಲೀಗ್‌ನ ಆರಂಭಕ್ಕಾಗಿ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. ಆದರೆ ಮಳೆ ಅವರ ಉತ್ಸಾಹಕ್ಕೆ ತಣ್ಣೀರು ಹಾಕುತ್ತೆ ಎನ್ನಲಾಗಿದೆ. ಮಳೆಯಿಂದಾಗಿ ಪ್ರಸ್ತುತ ಕೋಲ್ಕತ್ತಾದಲ್ಲಿ ಆರೆಂಜ್ ಘೋಷಣೆ ಮಾಡಲಾಗಿದೆ.

ಅಕ್ಯೂವೆದರ್ ವರದಿಯ ಪ್ರಕಾರ, ಇಂದು ಕೋಲ್ಕತ್ತಾದಲ್ಲಿ ಮಳೆಯಾಗುವ ಸಾಧ್ಯತೆ ಶೇಕಡಾ 90ರಷ್ಟಿದ್ದು, ಹೀಗಿದ್ದಾಗ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಉದ್ಘಾಟನಾ ಪಂದ್ಯಕ್ಕೆ ಮೀಸಲು ದಿನವಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಉದ್ಭವಿಸಿದೆ. ಐಪಿಎಲ್​ನಲ್ಲಿ ಮಳೆಯ ನಿಯಮಗಳು ಏನು ಹೇಳುತ್ತಿವೆ? ಇಲ್ಲಿದೆ ವಿವರ.

ಹೌದು, ಐಪಿಎಲ್ ಲೀಗ್ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದರೆ ಅದಕ್ಕೆ ಮೀಸಲು ದಿನವು ಇರುವುದಿಲ್ಲ. ಪಂದ್ಯ ರದ್ದುಗೊಂಡರೆ ಉಭಯ ತಂಡಗಳಿಗೂ ತಲಾ 1 ಅಂಕ ಹಂಚ...