ಭಾರತ, ಮಾರ್ಚ್ 3 -- ಕೋಲ್ಕತಾ ನೈಟ್ ರೈಡರ್ಸ್ (KKR)ನ ನೂತನ ನಾಯಕನ ನೇಮಕದ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ಕೊನೆಗೂ ತೆರೆ ಬಿದ್ದಿದೆ. ಶ್ರೇಯಸ್ ಅಯ್ಯರ್​ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಕೋಲ್ಕತ್ತಾ ನೂತನ ನಾಯಕನನ್ನು ಘೋಷಿಸಿದೆ. ಮಾರ್ಚ್​ 22ರಿಂದ ಶುರುವಾಗುವ ಐಪಿಎಲ್​​ಗೂ ಮುನ್ನ ಹಾಲಿ ಚಾಂಪಿಯನ್ ಅನುಭವಿ ಬ್ಯಾಟ್ಸ್​​ಮನ್ ಅಜಿಂಕ್ಯ ರಹಾನೆ (Ajinkya Rahane) ಅವರನ್ನು ನಾಯಕರನ್ನಾಗಿ ನೇಮಿಸಿದೆ. ಆದರೆ ನಾಯಕತ್ವದ ಆಕಾಂಕ್ಷೆಯಲ್ಲಿದ್ದ ಆಲ್​ರೌಂಡರ್ ವೆಂಕಟೇಶ್ ಅಯ್ಯರ್ ಅವರಿಗೂ ಪ್ರಮುಖ ಜವಾಬ್ದಾರಿ ನೀಡಲಾಗಿದೆ. ಅವರಿಗೆ ಉಪನಾಯಕತ್ವ ಪಟ್ಟ ಕಟ್ಟಲಾಗಿದೆ. ಆದರೆ ರಹಾನೆಯು ಐಪಿಎಲ್ ನಾಯಕತ್ವದಲ್ಲಿ ಕಳಪೆ ದಾಖಲೆ ಹೊಂದಿದ್ದಾರೆ.

2024ರ ಐಪಿಎಲ್​ನಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ನೈಟ್ ರೈಡರ್ಸ್​ 3ನೇ ಟ್ರೋಫಿಗೆ ಮುತ್ತಿಕ್ಕಿತ್ತು. ಆದರೆ ಮೆಗಾ ಹರಾಜಿಗೂ ಮುನ್ನ ತಂಡದಿಂದ ಹೊರನಡೆದು ಹರಾಜಿನಲ್ಲಿ 26.75 ಕೋಟಿಗೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಪಾಲಾಗಿರುವ ಅಯ್ಯರ್ ಸ್ಥಾನವನ್ನು 23.75 ಕೋಟಿ ರೂ ಪಡೆದಿರುವ ವೆಂ...