ಭಾರತ, ಮಾರ್ಚ್ 22 -- ನೂತನ ಐಪಿಎಲ್​ಗೀಗ 18ರ ಹುಮ್ಮಸ್ಸು. ತಂಡಗಳು ಹಳೆಯವೇ ಆದರೂ ಬಹುತೇಕ ಆಟಗಾರರು ಹೊಸಬರು, ಹೊಸ ನಾಯಕರು. ಸಂಭ್ರಮದ ಸಮಯಕ್ಕೆ ಕ್ರಿಕೆಟ್ ಅಭಿಮಾನಿಗಳ ಸಾಕ್ಷಿಯಾಗಲು ಸಜ್ಜಾಗಿದ್ದಾರೆ. ದೇಶದ 13 ಕ್ರೀಡಾಂಗಣಗಳಲ್ಲಿ ಫೈನಲ್ ಸೇರಿ 74 ಟಿ20 ಪಂದ್ಯಗಳು ನಡೆಯಲಿವೆ. ಇಂದು (ಮಾರ್ಚ್ 22) ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ 18ನೇ ಆವೃತ್ತಿಯ ನಗದು-ಶ್ರೀಮಂತ ಲೀಗ್‌ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಚೊಚ್ಚಲ ಟ್ರೋಫಿ ಗೆಲ್ಲುವ ಭರವಸೆ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಎದುರಿಸಲಿದೆ. ಪಂದ್ಯಕ್ಕೂ ಮುನ್ನ 10 ತಂಡಗಳ ಆಟಗಾರರ ಪಟ್ಟಿಯನ್ನೊಮ್ಮೆ ನೋಡೋಣ.

ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್ (ನಾಯಕ), ಎಂಎಸ್ ಧೋನಿ, ರವೀಂದ್ರ ಜಡೇಜಾ, ಶಿವಂ ದುಬೆ, ಮತೀಷ ಪತಿರಾಣ, ರಾಹುಲ್ ತ್ರಿಪಾಠಿ, ರಚಿನ್ ರವೀಂದ್ರ, ಆರ್ ಅಶ್ವಿನ್, ಖಲೀಲ್ ಅಹ್ಮದ್, ನೂರ್ ಅಹ್ಮದ್, ವಿಜಯ್ ಶಂಕರ್, ಸ್ಯಾಮ್ ಕರನ್, ಶೇಕ್ ರಶೀದ್, ಅಂಶುಲ್ ಕ...