Bengaluru, ಫೆಬ್ರವರಿ 27 -- Shakeela OTT: ವಯಸ್ಕ ಸಿನಿಮಾಗಳ ಮೂಲಕ ಸೌತ್‌ ಸಿನಿ ದುನಿಯಾದಲ್ಲಿ ಸೌಂಡ್‌ ಮಾಡಿದವರು ನಟಿ ಶಕೀಲಾ. ಇದೇ ಶಕೀಲಾ ಅವರ ಬಯೋಪಿಕ್‌ ಸಿನಿಮಾ 2020ರ ಡಿಸೆಂಬರ್‌ 25ರಂದು "ಶಕೀಲಾ" ಎಂಬ ಶೀರ್ಷಿಕೆಯೊಂದಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ವಿಮರ್ಶೆ ದೃಷ್ಟಿಯಿಂದ ಮಿಶ್ರ ಪ್ರತಿಕ್ರಿಯೆ ಪಡೆದ ಈ ಚಿತ್ರವನ್ನು ಸ್ಯಾಂಡಲ್‌ವುಡ್‌ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ನಿರ್ದೇಶನ ಮಾಡಿದ್ದರು. ಇದೀಗ ಇದೇ ಶಕೀಲಾ ಅವರ ಜೀವನ ಆಧರಿಸಿ ಮೂಡಿಬಂದಿದ್ದ ಪ್ಯಾನ್‌ ಇಂಡಿಯನ್‌ ಸಿನಿಮಾ, ಹತ್ರತ್ರ ಐದು ವರ್ಷಗಳ ಬಳಿಕ ಒಟಿಟಿಗೆ ಆಗಮಿಸಿದೆ.

ಶಕೀಲಾ ಅವರ ಬಯೋಪಿಕ್‌ನಲ್ಲಿ ಬಾಲಿವುಡ್‌ ನಟಿ ರಿಚಾ ಛಡ್ಡಾ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ. ಹಿಂದಿ ಜತೆಗೆ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸ್ಯಾಮಿ ಮ್ಯಾಜಿಕ್‌ ಸಿನಿಮಾ ಮೋಷನ್‌ ಪಿಕ್ಚರ್‌ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ಸ್ಯಾಮಿ ನನ್ವಾನಿ ಮತ್ತು ಸಾಹಿಲ್‌ ನನ್ವಾನಿ ಈ ಚಿತ್ರವನ...