ಭಾರತ, ಫೆಬ್ರವರಿ 16 -- ಐದು ರೀತಿಯ ಬೇಳೆಕಾಳುಗಳು (ದ್ವಿದಳ ಧಾನ್ಯಗಳು) ಮತ್ತು ಅಕ್ಕಿಯಿಂದ ತಯಾರಿಸಲಾದ ಈ ಉಪಾಹಾರ ರುಚಿಕರ ಮಾತ್ರವಲ್ಲದೆ ಪೌಷ್ಟಿಕವಾಗಿದೆ. ಬೆಳಗ್ಗಿನ ಉಪಾಹಾರ ಮತ್ತು ತಿಂಡಿ ತಿನ್ನಲು ಈ ಪಂಚರತ್ನ ದೋಸೆ ಉತ್ತಮ ಆಯ್ಕೆಯಾಗಿದೆ. ನೆನೆಸಿದ ಬೇಳೆಕಾಳುಗಳನ್ನು ರುಬ್ಬಿ, ರಾತ್ರಿಯಿಡೀ ಇಟ್ಟರೆ ನೀವು ಬೆಳಗ್ಗೆ ದೋಸೆ ಮಾಡಿ ತಿನ್ನಬಹುದು. ಪಂಚರತ್ನ ದೋಸೆ ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು: ಕಪ್ಪುಉದ್ದಿನಬೇಳೆ - 1/2 ಕಪ್, ಕಡಲೆಬೇಳೆ - 1/4 ಕಪ್, ತೊಗರಿಬೇಳೆ - 1/4 ಕಪ್, ಹೆಸರು ಬೇಳೆ- 1/4 ಕಪ್, ಕೆಂಪು ಬೇಳೆ- 1/4 ಕಪ್, ಅಕ್ಕಿ- 1 ಕಪ್, ಅಕ್ಕಿ ಹಿಟ್ಟು- 1 ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ.

ಇದನ್ನೂ ಓದಿ: ಮಕ್ಕಳಿಗಾಗಿ ತಯಾರಿಸಿ ಓಟ್ಸ್-ಬೀಟ್ರೂಟ್ ದೋಸೆ: ರುಚಿಯ ಜೊತೆಗೆ ಆರೋಗ್ಯಕ್ಕಿದೆ ಹಲವು ಪ್ರಯೋಜನ, ಇಲ್ಲಿದೆ ಪಾಕವಿಧಾನ

ತಯಾರಿಸುವ ವಿಧಾನ: ಬೇಳೆಕಾಳುಗಳು ಮತ್ತು ಅಕ್ಕಿಯನ್ನು ತೊಳೆದು ಕನಿಷ್ಠ 4 ಗಂಟೆಗಳ ಕಾಲ ನೆನೆಸಬೇಕು. ಸಾಧ್ಯವಾದರೆ, ಅದನ್ನು ರಾತ್ರಿ...