ಭಾರತ, ಜನವರಿ 31 -- ಪೋರ್ಚುಗಲ್‌ನ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ, ಕ್ರೀಡಾ ಲೋಕದ ಅತ್ಯಂತ ಜನಪ್ರಿಯ ಆಟಗಾರ. ಇದಕ್ಕೆ ಫುಟ್ಬಾಲ್‌ ಕ್ರೀಡೆಯಲ್ಲಿ ಅವರ ಅಮೋಘ ಪ್ರದರ್ಶನ ಹಾಗೂ ದಾಖಲೆಗಳೇ ಕಾರಣ. ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ರೊನಾಲ್ಡೊ, ಕಾಲ್ಚೆಂಡು ಕ್ರೀಡೆಯಲ್ಲಿ ಹಲವಾರು ದಾಖಲೆ ಹಾಗೂ ಮೈಲುಗಲ್ಲುಗಳನ್ನು ಸಾಧಿಸಿದ್ದಾರೆ. ಇದೀಗ ಪೋರ್ಚುಗಲ್‌ ಫುಟ್ಬಾಲ್‌ ದೈತ್ಯ ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ್ದಾರೆ.

ಸೌದಿ ಪ್ರೊ ಲೀಗ್‌ನಲ್ಲಿ ಗುರುವಾರ (ಜನವರಿ 30) ನಡೆದ ಪಂದ್ಯದಲ್ಲಿ ರೊನಾಲ್ಡೊ ಗಳಿಸಿದ ಗೋಲಿನ ನೆರವಿಂದ ಅಲ್ ನಾಸರ್‌ ತಂಡವು ಅಲ್-ರಯೆದ್ ತಂಡವನ್ನು 2-1 ಗೋಲುಗಳಿಂದ ಸೋಲಿಸಿತು. ಇದರೊಂದಿಗೆ ರೊನಾಲ್ಡೊ ಈಗ ಫುಟ್ಬಾಲ್‌ ಇತಿಹಾಸದಲ್ಲಿ ಕ್ಲಬ್‌ಗಳ ಪರ ಆಡಿ ಬರೋಬ್ಬರಿ 700 ಗೆಲುವುಗಳನ್ನು ದಾಖಲಿಸಿದ ವಿಶ್ವದ ಮೊದಲ ಮತ್ತು ಏಕೈಕ ಫುಟ್ಬಾಲ್ ಆಟಗಾರ' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಾರ್ಕಾ ಪ್ರಕಾರ, ರೊನಾಲ್ಡೊ ಸ್ಪೋರ್ಟಿಂಗ್‌ನೊಂದಿಗೆ 13, ರಿಯಲ್ ಮ್ಯಾಡ್ರಿಡ್‌ ಕ್...