Bengaluru, ಜನವರಿ 30 -- Urvashi Rautela: ಟಾಲಿವುಡ್‌ನ ಹಿರಿಯ ನಟ ನಂದಮೂರಿ ಬಾಲಕೃಷ್ಣ ನಟನೆಯ ಡಾಕು ಮಹಾರಾಜ್‌ ಸಿನಿಮಾ ಜನವರಿ 12ರಂದು ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಿತ್ತು. ವಿಮರ್ಶೆ ದೃಷ್ಟಿಯಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ಈ ಸಿನಿಮಾ, ಕಲೆಕ್ಷನ್‌ ವಿಚಾರದಲ್ಲಿ ಸದ್ದು ಮಾಡಿತ್ತು. ಬಾಬಿ ಕೊಲ್ಲಿ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರವನ್ನು ಸಂಗೀತದ ಮೂಲಕವೇ ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದರು ಎಸ್.ಎಸ್. ತಮನ್. ಬಾಲಿವುಡ್‌ ನಟ ಬಾಬಿ ಡಿಯೋಲ್ ಖಳನಾಯಕನಾಗಿ ನಟಿಸಿದರೆ, ಪ್ರಗ್ಯಾ ಜೈಸ್ವಾಲ್‌, ಶ್ರದ್ಧಾ ಶ್ರೀನಾಥ್‌, ಚಾಂದಿನಿ ಚೌಧರಿ ಈ ಚಿತ್ರದ ನಾಯಕಿಯರು. ಊರ್ವಶಿ ರೌಟೇಲಾ ಐಟಂ ಹಾಡಿನಲ್ಲಿ ಮಿಂಚಿದ್ದರು.

ಇದೀಗ ಸಿನಿಮಾ ಬಿಡುಗಡೆ ಆಗಿ 3 ವಾರದ ಮೇಲಾಯಿತು. ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ಇದೇ ಸಿನಿಮಾದ ಸಕ್ಸಸ್‌ ಪಾರ್ಟಿಯನ್ನು ಆಯೋಜಿಸಿತ್ತು ಚಿತ್ರತಂಡ. ವೇದಿಕೆ ಮೇಲೆ ಚಿತ್ರದಲ್ಲಿ ನಟಿಸಿದ ಪ್ರಮುಖ ಕಲಾವಿದರು ಹಾಜರಾಗಿದ್ದರು. ಆದರೆ, ವೇದಿಕೆ ಮೇಲಿದ್ದ ನಟಿ ಊರ್ವಶಿ ರೌಟೇಲಾ ಅವರನ್ನು ಕಡೆಗ...