ಭಾರತ, ಏಪ್ರಿಲ್ 28 -- ದಕ್ಷಿಣ ಭಾರತದ ಸೂಪರ್‌ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಕ್ರೇಜ್ ಎಷ್ಟಿದೆಯೆಂದರೆ, ಅವರು ಎಲ್ಲಿಗೆ ಹೋದರೂ ಅವರನ್ನು ನೋಡಲು ಅಭಿಮಾನಿಗಳ ದೊಡ್ಡ ಗುಂಪು ಸೇರುತ್ತದೆ. ಅಲ್ಲು ಅರ್ಜುನ್ ಅವರ ಕ್ರೇಜ್ ಎಷ್ಟಿದೆ ಎಂಬುದನ್ನು ಅವರ ಕೊನೆಯ ಕೆಲವು ಚಿತ್ರಗಳ ಕಲೆಕ್ಷನ್ ನೋಡಿದರೆ ತಿಳಿಯಬಹುದು. ಕಳೆದ ಕೆಲವು ವರ್ಷಗಳಲ್ಲಿ ಅಲ್ಲು ಅರ್ಜುನ್ ವೃತ್ತಿಜೀವನದ ಗ್ರಾಫ್ ಬಹಳ ವೇಗವಾಗಿ ಏರಿಕೆ ಕಂಡಿದೆ. ಅವರು ಅತ್ಯಂತ ದುಬಾರಿ ನಟರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲು ಅರ್ಜುನ್ ತಮ್ಮ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಚಿತ್ರಗಳ ಬಗ್ಗೆ ನೋಡೋಣ.

ಪುಷ್ಪ 2 - ದಿ ರೂಲ್‌: ಅಲ್ಲು ಅರ್ಜುನ್ ಹೆಚ್ಚು ಸಂಭಾವನೆ ಪಡೆದ ಚಿತ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಪುಷ್ಪ 2- ದಿ ರೂಲ್‌ ಚಿತ್ರ. ಈ ಚಿತ್ರಕ್ಕೆ ಅಲ್ಲು 300 ಕೋಟಿ ಸಂಭಾವನೆ ಪಡೆದಿದ್ದಾರಂತೆ. 500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಚಿತ್ರದ ಒಟ್ಟು ಕಲೆಕ್ಷನ್ ಸುಮಾರು 1,800 ಕೋಟಿ.

ಅಲ್ಲು ಅರ್ಜುನ್ ಅತಿ ಹೆಚ್ಚು ಸಂಭಾವನೆ ಪಡೆ...