ಭಾರತ, ಏಪ್ರಿಲ್ 16 -- ಕೋಲ್ಕತ್ತಾದಲ್ಲಿ ಶನಿವಾರ (ಏಪ್ರಿಲ್ 12) ನಡೆದ ಇಂಡಿಯನ್ ಸೂಪರ್ ಲೀಗ್​​​ನ (ISL 2024-25) ಮೋಹನ್ ಬಗಾನ್ ಸೂಪರ್ ಜೈಂಟ್ ಮತ್ತು ಬೆಂಗಳೂರು ಎಫ್​ಸಿ (Bengaluru FC) ಫೈನಲ್ ಪಂದ್ಯದ ನಂತರ ಕ್ರೀಡಾಂಗಣಕ್ಕೆ ಪಟಾಕಿಗಳನ್ನು ಎಸೆದ ಕಿಡಿಗೇಡಿಗಳ ಅಜಾಗರೂಕ ಮತ್ತು ಹೇಡಿತನದ ಕೃತ್ಯವನ್ನು ಬೆಂಗಳೂರು ಎಫ್‌ಸಿ ಖಂಡಿಸಿದೆ. ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (AIFF) ಮತ್ತು ಫುಟ್ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್​ಗೆ (FSDL) ಔಪಚಾರಿಕ ದೂರು ದಾಖಲಿಸಿದೆ.

ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಬಿಎಫ್‌ಸಿ ಅಭಿಮಾನಿಯೊಬ್ಬರ ಕಣ್ಣಿಗೆ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಲಬ್ ಮಾಲೀಕ ಪಾರ್ಥ್ ಜಿಂದಾಲ್ ಸೇರಿ ಇತರ ಅಭಿಮಾನಿಗಳಿಗೆ ಸುಟ್ಟ ಗಾಯಗಳಾಗಿವೆ. ಈ ಬಗ್ಗೆ ಏಪ್ರಿಲ್ 15ರಂದು ಬಿಎಫ್​ಸಿ ಹೇಳಿಕೆ ಬಿಡುಗಡೆ ಮಾಡಿದ್ದು, ಆಕ್ರೋಶ ವ್ಯಕ್ತಪಡಿಸಿದೆ. ಎಐಎಫ್​ಎಫ್​ ಮತ್ತು ಎಫ್​ಎಸ್​ಡಿಎಲ್​ಗೆ ಬಿಎಫ್​ಸಿ ಔಪಚಾರಿಕ ದೂರು ದಾಖಲಿಸಿದೆ. ಕ್ರೀಡಾಂಗಣಗಳಲ್ಲಿ ಅಭಿಮಾನಿಗಳ ಸುರಕ್ಷ...