ಭಾರತ, ಮಾರ್ಚ್ 13 -- ಇಂಡಿಯನ್ ಸೂಪರ್ ಲೀಗ್ (ISL) 2024-25 ಲೀಗ್ ಹಂತ ಮುಕ್ತಾಯಗೊಂಡಿದ್ದು, ರೋಮಾಂಚಕಾರಿ ಪ್ಲೇಆಫ್ ಕದನಕ್ಕೆ ವೇದಿಕೆ ಸಜ್ಜಾಗಿದೆ. ಮೋಹನ್​ ಬಗಾನ್ ಸೂಪರ್ ಜೈಂಟ್ ಮತ್ತು ಎಫ್‌ಸಿ ಗೋವಾ ನೇರ ಸೆಮಿಫೈನಲ್ ಸ್ಥಾನ ಪಡೆದುಕೊಂಡಿದ್ದು, ಬೆಂಗಳೂರು ಎಫ್‌ಸಿ, ಜೆಮ್ಶೆಡ್‌ಪುರ ಎಫ್‌ಸಿ, ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ಮತ್ತು ಮುಂಬೈ ಸಿಟಿ ಎಫ್‌ಸಿ ತಂಡಗಳು ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯಲು ನಾಕೌಟ್ ಸುತ್ತಿನಲ್ಲಿ ಹೋರಾಡಲಿವೆ.

ನಾಕೌಟ್ ಪಂದ್ಯಗಳು ಮಾರ್ಚ್ 29 ಮತ್ತು 30, 2025ರಂದು ನಡೆಯಲಿವೆ. ನಂತರ ಏಪ್ರಿಲ್ 2 ಮತ್ತು 3 ರಂದು ಸೆಮಿಫೈನಲ್ ಮೊದಲ ಲೆಗ್‌ಗಳು ಮತ್ತು ಏಪ್ರಿಲ್ 6 ಮತ್ತು 7 ರಂದು ಎರಡನೇ ಲೆಗ್‌ಗಳು ನಡೆಯಲಿವೆ. ವಿಜೇತರು ಫೈನಲ್​ಗೆ ಎಂಟ್ರಿಕೊಡುತ್ತಾರೆ. ಲೀಗ್ ಹಂತವು ಮಾರ್ಚ್ 12 ರಂದು ಮುಕ್ತಾಯಗೊಂಡಿತು. ಆದರೆ ಭಾರತೀಯ ಪುರುಷರ ರಾಷ್ಟ್ರೀಯ ತಂಡವು ಈ ಅವಧಿಯಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ. ಹೀಗಾಗಿ ಪ್ಲೇಆಫ್‌ ಪಂದ್ಯಗಳನ್ನು ತಡವಾಗಿ ನಡೆಸಲಾಗುತ್ತಿದೆ.

ಲೀಗ್ ಹಂತ...