Mysuru, ಏಪ್ರಿಲ್ 16 -- ಇದು ಹದಿನೈದು ವರ್ಷದ ಹಿಂದೆ ಮೈಸೂರಿನಲ್ಲಿ ಮರ ಕಡಿತ ಯತ್ನದ ಘಟನೆ. ಆಗ ಮೈಸೂರು ಮೇಯರ್ ಆಗಿದ್ದವರು ಸಂದೇಶ್ ಸ್ವಾಮಿ. ಮೈಸೂರಿನ ಕಾರಂಜಿಕೆರೆ, ಆಡಳಿತಾತ್ಮಕ ತರಬೇತಿ ಸಂಸ್ಥೆ ದಾಟಿಕೊಂಡು ಚಾಮುಂಡಿಬೆಟ್ಟಕ್ಕೆ ಹೋಗುವ ಹಾಗೂ ಕುರುಬಾರಹಳ್ಳಿಯ ಲಲಿತಮಹಲ್ ಹೊಟೇಲ್ ಗೇಟ್ ವರೆಗೆ ರಸ್ತೆ ಅಗಲೀಕರಣ ಮಾಡುವ ಪ್ರಸ್ತಾಪ ಬಂದಿತ್ತು. ಅದಕ್ಕಾಗಿ ಎಟಿಐ ಎದುರಿನ ಹತ್ತಾರು ಮರಗಳನ್ನು ಕಡಿದು ರಸ್ತೆ ಅಗಲೀಕರಣ ಮಾಡಲು ಸೂಚಿಸಲಾಯಿತು. ಆಗ ಮೈಸೂರು ವಿಭಾಗದ ಡಿಸಿಎಫ್ ಆಗಿದ್ದವರು ದಕ್ಷ ಹಾಗೂ ಪ್ರಾಮಾಣಿಕ ಐಎಫ್‌ಎಸ್‌ ಅಧಿಕಾರಿ ಶಾಶ್ವತಿ ಮಿಶ್ರ( Saswati Mishra). ಅರಣ್ಯ ಇಲಾಖೆಗೆ ಅನುಮತಿ ನೀಡುವಂತೆ ಪತ್ರ ಹೋಯಿತು. ಅವರು ಅನುಮತಿ ಕೊಡಲಿಲ್ಲ. ಭಾರೀ ಒತ್ತಡ ಬಂದಿತು. ಈ ರಸ್ತೆಯಲ್ಲಿ ಸಂಚರಿಸುವ ಮರಳು ಲಾರಿಗಳಿಂದ ಭಾರೀ ಅಪಘಾತಗಳು ಆಗುತ್ತಿವೆ. ಅಪಘಾತ ತಪ್ಪಿಸಲು ರಸ್ತೆ ಅಗಲೀಕರಣ ಮಾಡಿ.ಮರ ಕಡಿದು ಹಾಕಿ ಎಂದು ಹಲವರು ಒತ್ತಾಯಿಸಿದರು. ಇದಕ್ಕೆ ಶಾಶ್ವತಿ ಮಿಶ್ರ ಅವರು ಸುತಾರಾಂ ಒಪ್ಪಲಿಲ್ಲ. ಕೊನೆಗೆ ಒತ್ತಡ ಹೆಚ್ಚಾದ...