ಭಾರತ, ಏಪ್ರಿಲ್ 30 -- ರಾಗಿಣಿ ಮತ್ತು ಧರ್ಮ ಕೀರ್ತಿರಾಜ್‍ ಅಭಿನಯದ 'ಸಿಂಧೂರಿ' ಚಿತ್ರಕ್ಕೆ ಇಂದು ಚಾಲನೆ ಸಿಕ್ಕಿದೆ. ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತವಾಗಿದೆ. ಹೆಸರು ಕೇಳಿದವರೆಲ್ಲಾ, ಇದು IAS ಅಧಿಕಾರಿ ರೋಹಿಣಿ ಸಿಂಧೂರಿ ಕಥೆ ಇರಬಹುದು ಎಂದು ಅಂದಾಜಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಗಿಣಿ, ರೋಹಿಣಿ ಸಿಂಧೂರಿ ಪಾತ್ರವನ್ನು ಮಾಡಿದರೆ, ಧರ್ಮ ಕೀರ್ತಿರಾಜ್‍ ಅವರದ್ದು ಡಿ.ಕೆ. ರವಿ ಅವರ ಪಾತ್ರವಿರಬಹುದು ಎಂದು ಹೇಳುತ್ತಿದ್ದಾರೆ.

ನಿಜಕ್ಕೂ ಇದು ರೋಹಿಣಿ ಸಿಂಧೂರಿ ಅವರ ಕಥೆಯಾ? ಖಂಡಿತಾ ಇಲ್ಲ ಎನ್ನುತ್ತಿದ್ದಾರೆ ನಿರ್ದೇಶಕ ಶಂಕರ್‍ ಕೋನಮಾನಹಳ್ಳಿ. ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ, ಚಿತ್ರಕಥೆಯನ್ನು ಸಹ ಅವರೇ ರಚಿಸುತ್ತಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ಅವರು, 'ಶೀರ್ಷಿಕೆ ಕೇಳಿ ಹಲವರು ಇದು ರೋಹಿಣಿ ಸಿಂಧೂರಿ ಮತ್ತು ಡಿ.ಕೆ. ರವಿ ಅವರ ಕಥೆಯಾ ಕೇಳಿದ್ದಾರೆ. ರೋಹಿಣಿ ಸಿಂಧೂರಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ಕಾಲ್ಪನಿಕ ಕಥೆ. ಇದೊಂದು ಮರ್ಡರ್‍ ಮಿಸ್ಟ್ರಿ. ಇಲ...