Bengaluru, ಮೇ 10 -- ಈ ವಾರಾಂತ್ಯದಲ್ಲಿ ಒಂದು ಉತ್ತಮ ಹಾರರ್ ಥ್ರಿಲ್ಲರ್ ನೋಡಬೇಕೆಂದುಕೊಂಡಿದ್ದೀರಾ? ಹಾಗಾದರೆ ನಿಮಗಾಗಿ ಒಂದು ಮಲಯಾಳಂ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಆ ಚಿತ್ರದ ಹೆಸರು ʻವಡಕ್ಕನ್ʼ. ಎರಡು ತಿಂಗಳ ಹಿಂದೆ ಅಂದರೆ ಮಾರ್ಚ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರ ಈಗ ಡಿಜಿಟಲ್ ಪ್ರದರ್ಶನ ಕಂಡಿದೆ. ಅಷ್ಟೇ ಅಲ್ಲ, ಒಟಿಟಿಯಲ್ಲಿ ಬಿಡುಗಡೆಯಾದ ಮೊದಲ ದಿನವೇ ಟಾಪ್ 10 ಟ್ರೆಂಡಿಂಗ್ ಸಿನಿಮಾ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದೆ.

ಮಲಯಾಳಂ ಹಾರರ್ ಥ್ರಿಲ್ಲರ್ ಚಿತ್ರ ವಡಕ್ಕನ್ ಶುಕ್ರವಾರ (ಮೇ 9) ದಿಂದ ಅಮೆಜಾನ್‌ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಬಹುಭಾಷೆಗಳಲ್ಲಿ ಗುರುತಿಸಿಕೊಂಡಿರುವ ಸ್ಯಾಂಡಲ್‌ವುಡ್‌ ನಟ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಕೇವಲ 1 ಗಂಟೆ 50 ನಿಮಿಷಗಳ ಅವಧಿಯದ್ದಾಗಿದೆ. ಮಾರ್ಚ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಇದೀಗ ಒಟಿಟಿಗೆ ಆಗಮಿಸಿದೆ.

ಇದನ್ನೂ ಓದಿ: ಟೊವಿನೋ ಥಾಮಸ್ ...