Delhi, ಮೇ 4 -- ದೆಹಲಿ: ಭಾರತ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಹಾಗೂ ಅನುಭವಿ ಅರ್ಥಶಾಸ್ತ್ರಜ್ಞ ಕೃಷ್ಣಮೂರ್ತಿ ವಿ. ಸುಬ್ರಮಣಿಯನ್ ಅವರನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (IMF) ಭಾರತದ ಕಾರ್ಯನಿರ್ವಾಹಕ ನಿರ್ದೇಶಕ (ED) ಹುದ್ದೆಯಿಂದ ಹಠಾತ್ತನೆ ವಾಪಸ್ ಕರೆಸಿಕೊಳ್ಳಲಾಗಿದೆ. ಅವರ ಮೂರು ವರ್ಷಗಳ ಅವಧಿ ಪೂರ್ಣಗೊಳ್ಳುವ ಆರು ತಿಂಗಳ ಮೊದಲು ಈ ಹುದ್ದೆಯಿಂದ ಹಠಾತ್ತನೆ ವಾಪಸ್ ಕರೆಯಿಸಿಕೊಳ್ಳುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಈ ಕುರಿತು ಸಂಪುಟದ ನೇಮಕಾತಿ ಸಮಿತಿ ಅನುಮೋದಿಸಿದ ಕ್ರಮವನ್ನು 2025 ಏಪ್ರಿಲ್ 30 ರಂದು ಅಧಿಕೃತ ಆದೇಶದ ಮೂಲಕ ಪ್ರಕಟಿಸಲಾಗಿದ್ದು ಅಂದಿನಿಂದಲೇ ಆದೇಶವೂ ಜಾರಿಗೆ ಬಂದಿದೆ.

ಹೈದರಾಬಾದ್ನ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ (ಐಎಸ್ಬಿ) ನ ಸಹಾಯಕ ಪ್ರಾಧ್ಯಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ (ಸೆಂಟರ್ ಫಾರ್ ಅನಾಲಿಟಿಕಲ್ ಫೈನಾನ್ಸ್) ಕೃಷ್ಣಮೂರ್ತಿ ಸುಬ್ರಮಣಿಯನ್ ಅವರನ್ನು ಮೂರು ವರ್ಷಗಳ ಅವಧಿಗೆ 2022 ರ ಆಗಸ್ಟ್ ರಲ್ಲಿ ಐಎಂಎಫ್‌ಗೆ ಹುದ್ದೆಗೆ ನೇಮಿಸಲಾಗಿತ್ತು. ಅದ...