ಭಾರತ, ಏಪ್ರಿಲ್ 4 -- Tumakuru: ತುಮಕೂರು ಜಿಲ್ಲೆಯಲ್ಲಿ ನಾಳೆಯಿಂದ ಮೂರು ಪ್ರಮುಖ ದೇವಸ್ಥಾನಗಳಲ್ಲಿ ಜಾತ್ರಾ ಮಹೋತ್ಸವಗಳು ನಡೆಯಲಿವೆ. ಮುಖ್ಯವಾಗಿ ಕುಣಿಗಲ್ ತಾಲೂಕು ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿ ರಥೋತ್ಸವ, ತುಮಕೂರು ತಾಲೂಕು ಸ್ವಾಂದೇನಹಳ್ಳಿಯ ಶ್ರೀರಂಗನಾಥ ಸ್ವಾಮಿಯವರ ಬ್ರಹ್ಮರಥೋತ್ಸವ, ಗುಬ್ಬಿ ತಾಲ್ಲೂಕು ಹಾಗಲವಾಡಿ ಹೋಬಳಿ ಬೆಟ್ಟದಹಳ್ಳಿ ಗ್ರಾಮದ ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕು ಯಡಿಯೂರು ಶ್ರೀಸಿದ್ಧಲಿಂಗೇಶ್ವರ ಸ್ವಾಮಿಯ ಮಹಾ ರಥೋತ್ಸವ ಏಪ್ರಿಲ್ 5ರಂದು ಮಧ್ಯಾಹ್ನ 12 ಗಂಟೆಗೆ ಜರುಗಲಿದೆ. ಮಹಾ ರಥೋತ್ಸವ ಅಂಗವಾಗಿ ಏಪ್ರಿಲ್ 12ರ ವರೆಗೆ ಜಾತ್ರಾ ಕಾರ್ಯಕ್ರಮ ನಡೆಯಲಿದ್ದು, ಏಪ್ರಿಲ್ 6 ರಂದು ರಾತ್ರಿ 10 ಗಂಟೆಗೆ ಬಿಲ್ವವೃಕ್ಷ ವಾಹನೋತ್ಸವ, ಏಪ್ರಿಲ್ 7 ರಂದು ರಾತ್ರಿ 10 ಗಂಟೆಗೆ ಬೆಳ್ಳಿಪಲ್ಲಕ್ಕಿ ಉತ್ಸವ ಜರುಗಲಿವೆ.
ಪ್ರತಿ ವರ್ಷದಂತೆ ದನಗಳ ಜಾತ್ರೆ ನಡೆಯಲಿದ್ದು, ಜಾತ್ರೆಗೆ ಬರುವ ರಾಸುಗಳಿಗೆ ನೀರು ಮತ್ತು ನೆರಳಿನ ಸೌಲಭ್ಯ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.