ಭಾರತ, ಏಪ್ರಿಲ್ 19 -- ಸನ್ನಿ ಡಿಯೋಲ್‌, ರಣದೀಪ್‌ ಹೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಜಾಟ್‌ ಸಿನಿಮಾದ ಕುರಿತು ಹೊಸ ವಿವಾದವೊಂದು ಸೃಷ್ಟಿಯಾಗಿದೆ. ಏಪ್ರಿಲ್‌ 10ರಂದು ಬಿಡುಗಡೆಯಾದ ಈ ಸಿನಿಮಾದಲ್ಲಿ ಸನ್ನಿ ಡಿಯೋಲ್‌, ರಣದೀಪ್‌ ಹೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಶುಕ್ರವಾರ ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ನಟರಾದ ಸನ್ನಿ ಡಿಯೋಲ್‌ ರಣದೀಪ್‌ ಹೂಡಾರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಮಾಡಲಾಗಿದ್ದು, ಪ್ರಕರಣ ದಾಖಲಾಗಿದೆ. ಇದೀಗ ಚಿತ್ರ ತಯಾರಕರು ವಿವಾದಿತ ದೃಶ್ಯವನ್ನು ತೆಗೆಯುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

ಜಾಟ್‌ ಸಿನಿಮಾ ತಯಾರಕರು ಶುಕ್ರವಾರ ಅಧಿಕೃತ ಹೇಳಿಕೆ ಹೊರಡಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಬಂದಿರುವುದರಿಂದ ನಿರ್ದಿಷ್ಟ ದೃಶ್ಯವನ್ನು ತೆಗೆಯುವುದಾಗಿ ತಿಳಿಸಿದ್ದಾರೆ. "ಸಂಬಂಧಪಟ್ಟವರಿಗೆ, ಜಾಟ್‌ ಸಿನಿಮಾದ ನಿರ್ದಿಷ್ಟ ದೃಶ್ಯಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಆ ದೃಶ್ಯವನ್ನು ಚಿತ್ರದಿಂದ ತೆಗೆದುಹಾಕಲಾಗ...