Bengaluru, ಫೆಬ್ರವರಿ 5 -- ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ಫೆ.10ರಿಂದ 14ರ ತನಕ ನಡೆಯುವ ಬಹುನಿರೀಕ್ಷಿತ ಏರೋ ಇಂಡಿಯಾ ಶೋ 2025ರಲ್ಲಿ ಲೋಹದ ಹಕ್ಕಿಗಳ ಕಲರವ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ರಕ್ಷಣಾ ಪ್ರದರ್ಶನ ಸಂಸ್ಥೆ, ರಕ್ಷಣಾ ಉತ್ಪಾದನಾ ಇಲಾಖೆ, ರಕ್ಷಣಾ ಸಚಿವಾಲಯಗಳು ಜಂಟಿಯಾಗಿ ಆಯೋಜಿಸುವ ವೈಮಾನಿಕ ಪ್ರದರ್ಶನವು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ತನಕ ನಡೆಯಲಿದೆ. ಮೊದಲ 3 ದಿನಗಳು ವ್ಯಾಪಾರ ಸಂಬಂಧಿ ಚಟುವಟಿಕೆ ಮತ್ತು ವಹಿವಾಟುದಾರರಿಗೆ ಮೀಸಲು ಆಗಿದ್ದರೆ, ಉಳಿದ 2 ದಿನಗಳು (ಫೆ 13 ಹಾಗೂ 14) ಸಾರ್ವಜನಿಕರಿಗೆ ತೆರೆದಿರುತ್ತದೆ.

ಜಾಗತಿಕ ವೈಮಾನಿಕ ಮಾರಾಟಗಾರರು ಮತ್ತು ಭಾರತೀಯ ವಾಯುಪಡೆ (IAF) ವಿಭಿನ್ನ ವಿಮಾನ, ಹೆಲಿಕಾಪ್ಟರ್‌ಗಳನ್ನು ಆಕಾಶದಲ್ಲಿ ಉಡಾವಣೆ ಮಾಡುವ ಮೂಲಕ ಜನರಿಗೆ ಪರಿಚಯ ಮಾಡಿಕೊಡಲಿದೆ. ಇದನ್ನು ಕಣ್ತುಂಬಿಕೊಳ್ಳಲು ನೋಂದಣಿ ಕಡ್ಡಾಯ. ನೀವು ಏರ್ ಶೋನಲ್ಲಿ ಭಾಗವಹಿಸಲು ಬಯಸಿದರೆ ಟಿಕೆಟ್ ಬೆಲೆಗಳ ವಿವರ ಇಲ್ಲಿದೆ.

* ಬಿಸಿನೆಸ್ ಪಾಸ್: ಭಾರತೀಯ ಪ್ರಜೆಗಳು 5,000 ...