ಭಾರತ, ಏಪ್ರಿಲ್ 17 -- ಬುಧವಾರ ಏಪ್ರಿಲ್ 16ರಂದು ಅಂತರರಾಷ್ಟ್ರೀಯ ಸ್ಪಾಟ್ ಚಿನ್ನದ ಬೆಲೆ ಔನ್ಸ್‌ಗೆ 3,318 ಯುಎಸ್‌ಡಿ (ಯುನೈಟೆಡ್ ಸ್ಟೇಟ್‌ ಡಾಲರ್) ತಲುಪಿದ್ದರೆ, ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 98,100 ರೂಪಾಯಿ ಏರಿದೆ. ಅಮೆರಿಕ - ಚೀನಾ ನಡುವಿನ ಸುಂಕ ಸಮರ ಉತ್ತುಂಗಕ್ಕೇರಿ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಚೀನಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಅಮೆರಿಕ ಶೇ.245 ರಷ್ಟು ಸುಂಕ ವಿಧಿಸುತ್ತಿರುವುದಾಗಿ ಘೋಷಿಸಿದೆ. ಇತ್ತ ಚೀನಾ ಕೂಡ ಅಮೆರಿಕಕ್ಕೆ ತಕ್ಕ ಉತ್ತರ ನೀಡಿದ್ದು, ಅಮೆರಿಕದ ಬೋಯಿಂಗ್ ವಿಮಾನಗಳು ಮತ್ತು ಬಿಡಿಭಾಗಗಳ ಖರೀದಿಯನ್ನು ನಿಲ್ಲಿಸಿದೆ. ಹೀಗೆ ಚೀನಾ- ಅಮೆರಿಕ ನಡುವಿನ ಬಿಕ್ಕಟ್ಟು ಜಾಗತಿಕ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆ.

ಇದರಿಂದ ಹೂಡಿಕೆದಾರರು ಚಿನ್ನದ ಮೇಲೆ ತಮ್ಮ ಗಮನಹರಿಸಿದ್ದಾರೆ. ಇದೇ ಕಾರಣಕ್ಕೆ ಚಿನ್ನದ ದರ ಏರಿಕೆಯಾಗುತ್ತಿದೆ. ಕಳೆದ ಎರಡೇ ದಿನದಲ್ಲಿ ಆಭರಣ ಚಿನ್ನದ ಬೆಲೆ 2000ರೂ ಏರಿಕೆಯಾಗಿ ಹೊಸ ದಾಖಲೆ ಬರೆದಿದೆ. ಎಂಟು ದಿನಗಳಲ್ಲಿ ಚಿನ್ನದ ಬೆಲೆಯಲ್ಲ...