ಭಾರತ, ಏಪ್ರಿಲ್ 9 -- ಬೆಂಗಳೂರಿನಲ್ಲಿ ಪ್ರತಿ ವರ್ಷವೂ ನಡೆಯುವ ಕರಗ ನೋಡಲು ಸಾಕಷ್ಟು ಜನ ಕಾತರದಿಂದ ಕಾಯುತ್ತಿರುತ್ತಾರೆ. ಅಷ್ಟೇ ಅಲ್ಲ ಕರಗ ಹಿನ್ನೆಲೆ ಹಾಗೂ ಧಾರ್ಮಿಕ ಸಂಪ್ರದಾಯಗಳಲ್ಲಿ ಈ ಆಚರಣೆಗೆ ಮಹತ್ವವಿದೆ. ಬಹಳ ಭಕ್ತಿಯಿಂದ ಕರಗವನ್ನು ಆಚರಿಸಲಾಗುತ್ತದೆ. ಶತಮಾನಗಳಷ್ಟು ಹಳೆಯದಾದ ಬೆಂಗಳೂರಿನ ಅಪ್ರತಿಮ ಕರಗ ಉತ್ಸವವು ಏಪ್ರಿಲ್ 12ರಂದು ಭವ್ಯ ಕರಗ ಮೆರವಣಿಗೆಯೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ನಗರದ ಪ್ರಮುಖ ಧಾರ್ಮಿಕ ಸಂಪ್ರದಾಯಗಳಲ್ಲಿ ಒಂದೆಂದು ಪರಿಗಣಿಸಲಾದ ವಾರ್ಷಿಕ ಕಾರ್ಯಕ್ರಮವು ಹಳೆಯ ಬೆಂಗಳೂರಿನ ತಿಗಳರಪೇಟೆಯಲ್ಲಿರುವ ಐತಿಹಾಸಿಕ ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತದೆ. ಈ ವರ್ಷದ ಕರಗವನ್ನು ಈ ಹಿಂದೆ 14 ಬಾರಿ ಮೆರವಣಿಗೆಯ ನೇತೃತ್ವ ವಹಿಸಿದ್ದ ಅರ್ಚಕ ಜ್ಞಾನೇಂದ್ರ ವನ್ಹಿಕುಲ ಗೌಡ ಅವರು ಹೊತ್ತೊಯ್ಯಲಿದ್ದಾರೆ.

ಏಪ್ರಿಲ್ 12ರ ರಾತ್ರಿ ದ್ರೌಪದಿಯ ಸಂಕೇತವಾದ ಪವಿತ್ರ ಹೂವಿನ ದಿಂಡು ಮತ್ತು ದೇವಿಯ ವಿಗ್ರಹವನ್ನು ಹೊಂದಿರುವ ಕಲಶವನ್ನು ಹೊರಲಿದ...