Bengaluru, ಏಪ್ರಿಲ್ 18 -- ಏಪ್ರಿಲ್ ತಿಂಗಳ ಮಾಸ ಶಿವರಾತ್ರಿ: ವೈಶಾಖ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನದಂದು ಮಾಸ ಶಿವರಾತ್ರಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಶಿವನಿಗೆ ಅರ್ಪಿಸಲಾಗಿದೆ. ಹಿಂದೂ ಧರ್ಮದಲ್ಲಿ ಮಾಸ ಶಿವರಾತ್ರಿಗೆ ವಿಶೇಷ ಮಹತ್ವವಿದೆ. ಈ ದಿನ, ಶಿವನ ಕುಟುಂಬವನ್ನು ಪೂರ್ಣ ಮನಸ್ಸಿನಿಂದ ಪೂಜಿಸಲಾಗುತ್ತದೆ. ಮಾಸ ಶಿವರಾತ್ರಿಯ ಪವಿತ್ರ ಹಬ್ಬವನ್ನು ಏಪ್ರಿಲ್ ನಲ್ಲಿ ಶನಿವಾರ ಆಚರಿಸಲಾಗುವುದು. ಶಿವನನ್ನು ಪೂಜಿಸಿದರೆ ಭಕ್ತರ ಎಲ್ಲಾ ಆಸೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ವೈಶಾಖ ಮಾಸ ಶಿವರಾತ್ರಿಯ ದಿನಾಂಕಗಳು, ಮುಹೂರ್ತ, ಪೂಜಾ ವಿಧಿ ಮತ್ತು ಪೂಜೆಗೆ ಬೇಕಿರುವಂತಹ ಸಾಮಗ್ರಿಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಪೂಜಾ ಸಾಮಗ್ರಿಗಳು: ಮಾಸ ಶಿವರಾತ್ರಿಯ ಪೂಜೆಗೆ ಬೇಕಿರುವ ಸಾಮಾಗ್ರಿಗಳೆಂದರೆ ಬಿಲ್ವಪತ್ರೆ, ಬಿಳಿ ಶ್ರೀಗಂಧ, ಅಕ್ಷತೆಕಾಳು, ಕಪ್ಪು ಎಳ್ಳು, ಭಾಂಗ್, ದತ್ತುರಾ, ಶಮಿ ಹೂವುಗಳು, ಕನೇರ್ ಹೂವುಗಳು, ಹಣ್ಣುಗಳು, ಸಿಹಿತಿಂಡಿಗಳು, ಬಿಳಿ ಹೂವುಗಳು, ಗಂಗಾಜಲ, ಹಸುವಿನ ಹಾಲು, ಜೇನುತುಪ್ಪ,...