Bangalore, ಮೇ 4 -- ವರ್ಷ ಪ್ರಾರಂಭವಾಗಿ ನಾಲ್ಕು ತಿಂಗಳಾಗಿವೆ. 90 ಪ್ಲಸ್ ಚಿತ್ರಗಳು ಬಿಡುಗಡೆಯಾಗಿವೆ. ಆದರೆ, ಇದುವರೆಗೂ ಕನ್ನಡದಲ್ಲಿ ಒಂದೇ ಒಂದು ಚಿತ್ರ ಸಹ ದೊಡ್ಡ ಯಶಸ್ಸು ಪಡೆದಿಲ್ಲ. ಮೊದಲ ಮೂರು ತಿಂಗಳಲ್ಲಿ 70ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿದ್ದವು. ಆದರೆ, ಒಂದೆರಡು ಗಮನಸೆಳೆದರೂ ಯಾವೊಂದು ಚಿತ್ರವೂ ದೊಡ್ಡ ದುಡ್ಡು ಮಾಡಲಿಲ್ಲ, ದೊಡ್ಡ ಯಶಸ್ಸು ಪಡೆಯಲಿಲ್ಲ. ಏಪ್ರಿಲ್ ತಿಂಗಳಲ್ಲಾದರೂ ಕನ್ನಡ ಚಿತ್ರರಂಗ ಒಂದು ಯಶಸ್ಸು ಕಾಣಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಏಪ್ರಿಲ್‍ನಲ್ಲಿ 16 ಚಿತ್ರಗಳು ಬಿಡುಗಡೆಯಾಗಿದ್ದು, ಯಾವೊಂದು ಚಿತ್ರ ಸಹ ಹಾಕಿದ ಬಂಡವಾಳವನ್ನು ಪಡೆಯಲಿಲ್ಲ ಎಂಬುದು ಬೇಸರದ ಸಂಗತಿ.
ಏಪ್ರಿಲ್ ತಿಂಗಳ ಮೊದಲ ಶುಕ್ರವಾರ (ಏಪ್ರಿಲ್ 04) ಮೂರು ಚಿತ್ರಗಳು ಬಿಡುಗಡೆಯಾದವು. ಈ ಪೈಕಿ 'ಬೆಂಕಿಯ ಬಲೆ', 'ನಿಂಬಿಯ ಬನಾದ ಮ್ಯಾಗ' ಮತ್ತು 'ನಿಮ್ದೆ ಕಥೆ' ಚಿತ್ರಗಳು ಸೇರಿವೆ. ಮೂರೂ ಹೊಸಬರ ಚಿತ್ರಗಳೇ. ಈ ಪೈಕಿ 'ನಿಂಬಿಯ ಬನಾದ ಮ್ಯಾಗ' ಚಿತ್ರದ ಮೂಲಕ ಡಾ. ರಾಜಕುಮಾರ್ ಅವರ ಮೊಮ್ಮಗ ಷಣ್ಮುಖ ಗೋವಿಂದರಾ...
Click here to read full article from source
To read the full article or to get the complete feed from this publication, please
Contact Us.