ಭಾರತ, ಏಪ್ರಿಲ್ 27 -- ಬೆಂಗಳೂರು: ಹೆಬ್ಬಾಳದ ಜಂಕ್ಷನ್​ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಬಿಡಿಎ ಎಲಿವೇಟೆಡ್​ ಲೂಪ್​ ಕಾಮಗಾರಿ ಏಪ್ರಿಲ್ ತಿಂಗಳ ಅಂತ್ಯದೊಳಗೆ ಮುಗಿಯಬೇಕಿತ್ತು. ಆದರೆ ಏಪ್ರಿಲ್​ ಮುಗಿಯುತ್ತಾ ಬಂದರೂ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದು ಅಚ್ಚರಿ ಮೂಡಿಸಿದೆ. ಸಂಚಾರ ಮುಕ್ತ ಮಾಡುವುದೇ ಮೇಲ್ಸೇತುವೆ ನಿರ್ಮಾಣದ ಉದ್ದೇಶವಾಗಿದ್ದರೂ ಕಾಮಗಾರಿ ವಿಳಂಬ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

ಬಹಳಷ್ಟು ಕೆಲಸಗಳು ಬಾಕಿ ಉಳಿದಿದ್ದರೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಕಾಮಗಾರಿಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ. ಮತ್ತು ಮೇ ಮಧ್ಯಭಾಗದ ವೇಳೆಗೆ ರ‍್ಯಾಂಪ್ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಅನೇಕ ಕಂಬಗಳನ್ನು ನಿರ್ಮಿಸಲಾಗಿದ್ದರೂ, ವಿಶೇಷವಾಗಿ ರೈಲ್ವೆ ಮಾರ್ಗದ ಮೇಲೆ ಇನ್ನೂ ಗಮನಾರ್ಹ ಅಂತರ ಇದೆ.

ನಿರ್ಮಾಣ ಪ್ರಕ್ರಿಯೆಯು ಅಸ್ತವ್ಯಸ್ತವಾಗಿದ್ದು, ಲೋಹದ ಬ್ಲಾಕ್‌ಗಳು ಮತ್ತು ಧೂಳಿನ ರಾಶಿಗಳು ಸ್ಥಳದಲ್ಲಿ ಹರಡಿಕೊಂಡಿದೆ. ಪಾದಚಾರಿಗಳು ಮತ್ತು ಸವಾರರು ನಿ...