ಭಾರತ, ಮಾರ್ಚ್ 31 -- ಬ್ರೈನ್ ರಾಟ್ ಈ ಪದವು 1854ರಲ್ಲಿ ಮೊದಲ ಬಾರಿಗೆ ಬಳಕೆಗೆ ಬಂದಿತು. ಬ್ರೈನ್ ರಾಟ್ ಎನ್ನುವುದು ಅತಿಯಾಗಿ ಅಂತರ್ಜಾಲ ಬಳಸುವುದನ್ನು ಸಂಕೇತಿಸುತ್ತದೆ. ಅಂದರೆ ಸಣ್ಣಪುಟ್ಟ ಮಾಹಿತಿಗೂ ನಾವು ಅಂತರ್ಜಾಲದ ಮೇಲೆ ಅವಲಂಬಿತರಾಗಿರುವುದು ಎಂದರ್ಥ. ಇದರಿಂದ ನಿಮ್ಮ ಆಲೋಚನಾಕ್ರಮ ಕುಂಠಿತಗೊಳ್ಳುತ್ತದೆ, ನಮ್ಮಲ್ಲಿ ಸ್ವಂತವಾಗಿ ಯೋಚಿಸಬೇಕು ಎನ್ನುವ ಮನೋಭಾವವೂ ಇರುವುದಿಲ್ಲ. ಇದು ನಮ್ಮನ್ನು ಮಂದವಾಗಿಸುತ್ತದೆ. ಗಂಟಗಟ್ಟಲೆ ಅರ್ಥವಿಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುವವರೂ ಬ್ರೈನ್ ರಾಟ್ ಅನುಭವಿಸಿ ಇರುತ್ತಾರೆ. ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ (OUP) ಈ ಪದವನ್ನು 2024ರ ಪದ ಎಂದು ಘೋಷಿಸಿತ್ತು. ಯಾಕೆಂದರೆ 2023-2024ರಲ್ಲಿ ಈ ಪದದ ಬಳಕೆ ಹೆಚ್ಚಿತ್ತು.

ಬ್ರೈನ್ ರಾಟ್ ಎಂದರೆ ಕನ್ನಡದಲ್ಲಿ ಮೆದುಳು ಕೊಳೆಯುವಿಕೆ ಎಂದು ಅರ್ಥೈಸಬಹುದು. ಇದು ಒಬ್ಬ ವ್ಯಕ್ತಿಯ ಮಾನಸಿಕ ಅಥವಾ ಬೌದ್ಧಿಕ ಸ್ಥಿತಿಯ ಕ್ಷೀಣತೆಯನ್ನು ಸೂಚಿಸುತ್ತದೆ. ಈ ಬ್ರೈನ್ ರಾಟ್ ಸಮಸ್ಯೆ ಇರುವವರು ಅತ್ಯಂತ ಸರಳ, ಚಿಕ್ಕಪುಟ್ಟ ವಿಚಾರಗಳ ...