ಭಾರತ, ಮೇ 5 -- ಹೆರಿಗೆಯ ಸಮಯದಲ್ಲಿ ಸಾಮಾನ್ಯವಾಗಿ ಯಾವುದೇ ತೊಂದರೆಗಳು ಎದುರಾಗುವುದಿಲ್ಲ. ಆದರೆ ಕೆಲವೊಂದು ಅಪರೂಪದ ಸಂದರ್ಭಗಳಲ್ಲಿ ಭುಜದ ಡಿಸ್ಟೋಸಿಯಾದಂತಹ ಸಮಸ್ಯೆಗಳು ಎದುರಾಗಬಹುದು.ಇದರಿಂದ ಉಂಟಾಗುವ ಸಮಸ್ಯೆಗಳಲ್ಲಿ ಒಂದು ಪ್ರಸೂತಿ ಸಂಬಂಧಿತ ಬ್ರೆಕಿಯಲ್ ಪ್ಲೆಕ್ಸಸ್ ಪಾಲ್ಸಿ (OBPP), ಇದು ಹೆರಿಗೆಯ ಸಮಯದಲ್ಲಿ ಸಂಭವಿಸಬಹುದಾದ ನರಗಳ ಗಾಯವಾಗಿದೆ. ಇದು ನವಜಾತ ಶಿಶುವಿನ ತೋಳು ದುರ್ಬಲಗೊಳ್ಳಲು ಅಥವಾ ತೀವ್ರತರವಾದ ಸಂದರ್ಭಗಳಲ್ಲಿ ಪಾರ್ಶ್ವವಾಯುವಿಗೆ ಕಾರಣವಾಗಬಹುದು.

ಒಬಿಪಿಪಿಯಿಂದ ಉಂಟಾಗುವ ತೊಂದರೆಗಳು, ಅದರ ರೋಗಲಕ್ಷಣಗಳನ್ನು ಅರಿತುಕೊಳ್ಳುವುದು ಅನಿವಾರ್ಯವಾಗಿದೆ. ಶೀಘ್ರವಾಗಿ ಗುರುತಿಸುವುದು ಮತ್ತು ತ್ವರಿತ ಚಿಕಿತ್ಸೆ ಪಡೆಯುವುದು, ದೀರ್ಘಕಾಲದಲ್ಲಿ ಸಂಭವಿಸಬಹುದಾದ ತೊಡಕುಗಳನ್ನು ನಿವಾರಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.

ಒಬಿಪಿಪಿ ಎಂಬುದು ಹೆರಿಗೆಯ ಸಮಯದಲ್ಲಿ ಉಂಟಾಗುವ ಗಾಯವಾಗಿದ್ದು, ಇದರಿಂದ ಬೆನ್ನುಮೂಳೆಯನ್ನು ಭುಜ, ತೋಳು ಮತ್ತು ಕೈಗಳಿಗೆ ಸಂಪರ್ಕಿಸುವ ನರಗಳು ಎಳೆತಕ್ಕೆ ಒಳಗಾಗುವುದು ಅಥವಾ ಹರಿದು...