ಭಾರತ, ಫೆಬ್ರವರಿ 13 -- ಇತ್ತೀಚೆಗಷ್ಟೇ ಮಹಿಳೆಯೊಬ್ಬರು ಸ್ಟೇಜ್ ಮೇಲೆ ಡಾನ್ಸ್ ಮಾಡುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಪ್ರಕರಣದ ವಿಡಿಯೊ ಭಾರಿ ವೈರಲ್ ಆಗುತ್ತಿದೆ. ಯುವ, ಆರೋಗ್ಯವಂತ ಜನರು ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗುತ್ತಿದೆ. ಹೃದಯಾಘಾತದಲ್ಲೂ ಹಲವು ಪ್ರಕಾರಗಳಿದ್ದು, ಕೆಲವು ಪ್ರಕಾರಗಳು ಅರಿವಿಗೇ ಬಾರದಂತೆ ಸಾವಿನ ದವಡೆಗೆ ತಳ್ಳುತ್ತಿವೆ.

ಮಹಿಳೆಯರಲ್ಲಿ ಹೃದಯಾಘಾತ ಹೆಚ್ಚಲು ಕೆಲವು ನಿಗೂಢ ಅಂಶಗಳು ಕಾರಣವಾಗುತ್ತಿವೆ. ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ​​20 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ಶೇ 45ಕ್ಕಿಂತ ಹೆಚ್ಚು ಯುವತಿಯರು ಯಾವುದಾದರೂ ಒಂದು ರೀತಿಯ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಆಘಾತಕಾರಿ ಅಂಶವೊಂದನ್ನು ಬಹಿರಂಗ ಪಡಿಸಿದೆ.

ಎಸ್‌ಸಿಎಡಿ (SCAD) ಅಥವಾ ಸ್ವಯಂಪ್ರೇರಿತ ಪರಿಧಮನಿಯ ಛೇದನ ಎಂದೂ ಕರೆಯಲ್ಪಡುವ ಮಾರಣಾಂತಿಕ ಸ್ಥಿತಿಯು ಪರಿಧಮನಿಯ ಗೋಡೆಯಲ್ಲಿ ಬೇರ್ಪಡುವಿಕೆ ಅಥವಾ ಛಿದ್ರವಾದಾಗ ಸಂಭವಿಸುತ್ತದೆ, ಇದು ಪರಿಧಮನಿಯ ...