ಭಾರತ, ಫೆಬ್ರವರಿ 1 -- ಆನ್‌ಲೈನ್‌ ಪ್ರಪಂಚ ಎಂಬುದು ಅಗಾಧ, ಇಲ್ಲಿ ಸಿಗುವ ಮಾಹಿತಿಗಳೂ ಹೇರಳ. ಅವುಗಳಲ್ಲಿ ಕೆಲವು ಉಪಯುಕ್ತ, ಕೆಲವು ನಿರುಪಯುಕ್ತ, ಇನ್ನೂ ಕೆಲವು ಅಪಾಯಕಾರಿ. ಈ ಮಾಹಿತಿಗಳನ್ನು ಕೆಲವು ವಿಷಯಗಳಿಗೆ ಬಳಸುವುದು ಸರಿ. ಆದರೆ ದೇಹ, ಮನಸ್ಸು ಎಂದು ಬಂದಾಗ ಈ ಮಾಹಿತಿಗಳನ್ನು ಅಳವಡಿಸಿಕೊಳ್ಳುವುದು ಎಷ್ಟು ಸರಿ?

ಸಾಫ್ಟ್‌ವೇರ್‌ ಉದ್ಯೋಗಿಯೊಬ್ಬರಿಗೆ ಡೆಂಗ್ಯೂ ಬಂದು ಒಂದು ತಿಂಗಳು ಒದ್ದಾಡಿದರು. ಅದಾದ ನಂತರ ವೈದ್ಯಕೀಯ ಶುಶ್ರೂಷೆ ಪಡೆದು ಗುಣಮುಖರಾದರು. ಆದರೆ ಮತ್ತೊಂದು ಸಮಸ್ಯೆ ಕಾಡತೊಡಗಿತು. ಅದು ತಮ್ಮ ಆರೋಗ್ಯದ ಕುರಿತು ಬಹಳ ಭಯ, ಚಿಂತೆ, ಯೋಚನೆ, ತನಗೇನೋ ಆಗಿ ಹೋದೀತೆಂಬ ಅನಗತ್ಯ ಆತಂಕ ಸೃಷ್ಟಿಸಲು ಕಾರಣವಾಯ್ತು. ಇದರ ಜೊತೆಗೆ ಒಂದೆರೆಡು ಪ್ಯಾನಿಕ್ ಅಟ್ಯಾಕ್‌ಗಳೂ ಆದವು.

ಇದರಿಂದ ಅವರು ಅತಿಯಾಗಿ ಕಾಯಿಲೆಗಳ ಬಗ್ಗೆ ಗೂಗಲ್ ಸರ್ಚ್ ಮಾಡತೊಡಗಿದರು. ವಿವಿಧ ಕಾಯಿಲೆಗಳ ಲಕ್ಷಣಗಳನ್ನು ಓದಿ ತಮಗೂ ಈ ಕಾಯಿಲೆ ಬಂದಿರಬಹುದೆಂಬ ಭಾವನೆಯಲ್ಲಿ ಭಯಪಡತೊಡಗಿದರು. ಸಿಕ್ಕ ಸಿಕ್ಕ ಆಯುರ್ವೇದ ಔಷಧಿ, ಸೊಪ್ಪು, ಗಿಡಮೂಲಿಕೆ ಮದ್ದ...