ಭಾರತ, ಮಾರ್ಚ್ 6 -- ಮನೆ, ಮಕ್ಕಳು ಅಂದಮೇಲೆ ಕಿರಿಕಿರಿ, ಒತ್ತಡ ಸರ್ವೇಸಾಮಾನ್ಯ. ಆದರೆ, ಮಕ್ಕಳು ಪ್ರತಿ ಮಾತಿಗೂ ಕಿರಿಕಿರಿ, ಜಗಳ ಮಾಡುವುದು, ಸಿಕ್ಕ ವಸ್ತುಗಳನ್ನೆಲ್ಲ ಎಸೆಯುವುದು, ಆಕ್ರೋಶದಿಂದ ನಡೆದುಕೊಳ್ಳುತ್ತಿದ್ದರೆ ನಿಯಂತ್ರಿಸುವುದು ಕೂಡ ಅಸಾಧ್ಯವೇ ಹೌದು. ಇಂತಹ ಬೆಳವಣಿಗೆಗಳಿಗೆ ಮುಖ್ಯವಾಗಿ ಮಕ್ಕಳಲ್ಲಿ ಆಗುತ್ತಿರುವ ಹಾರ್ಮೋನ್‌ಗಳ ಬದಲಾವಣೆ ಒಂದು ಕಡೆಯಾದರೆ, ಮಕ್ಕಳು ವಾಸವಾಗಿರುವ ವಾತವರಣ ಇನ್ನೊಂದು ಕಾರಣವೆಂದೇ ಹೇಳಬಹುದು.

ಕೆಲ ಮಕ್ಕಳು ಮನೆಯಿಂದ ದೀರ್ಘಕಾಲ ದೂರ ಉಳಿಯುವುದರಿಂದ ಅವರಲ್ಲಿ ಉಂಟಾಗುವ ಅಧಿಕ ಒತ್ತಡ, ಒಂಟಿತನ, ಪೋಷಕರ ಪ್ರೀತಿ, ವಾತ್ಸಲ್ಯ, ಶೈಕ್ಷಣಿಕ ಒತ್ತಡ, ವೈಯಕ್ತಿಕ ತೊಂದರೆಗಳು, ಅನಾರೋಗ್ಯ ಹೀಗೆ ಇತ್ಯಾದಿ ಸಮಸ್ಯೆಗಳು ಅವರ ಮಾನಸಿಕ ಅಸಮತೋಲನಕ್ಕೆ ಕಾರಣವಾಗಬಹುದು. ಇನ್ನೂ ಕೆಲ ಮಕ್ಕಳು ತಮ್ಮ ಮನೆಯಲ್ಲೇ ಇದ್ದರೂ ಅವರ ಪೋಷಕರ ವರ್ತನೆಗಳಿಂದ ಕಿರಿಕಿರಿಗೆ ಕಾರಣವಾಗಬಹುದು. ಹಾಗಾಗಿ ಪೋಷಕರು ಮಕ್ಕಳನ್ನು ಬೆಳೆಸುವ ರೀತಿ ಚೆನ್ನಾಗಿರಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಮಕ್ಕಳ ಗಲಾಟೆ, ಸಿಟ್ಟನ್ನು ...