ಭಾರತ, ಮಾರ್ಚ್ 24 -- ಮಹಾರಾಷ್ಟ್ರ: ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಸ್ಟ್ಯಾಂಡ್‌ ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ದೇಶದ್ರೋಹಿ ಎಂದು ಟೀಕಿಸಿದ್ದಾರೆ. ಈ ವಿಚಾರವು ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದು ಮಾತ್ರವಲ್ಲ, ಕಾರ್ಯಕ್ರಮ ಆಯೋಜಿಸಿದ್ದ ಸ್ಟುಡಿಯೊವನ್ನು ಶಿಂಧೆ ಬೆಂಬಲಿಗರು ಧ್ವಂಸ ಮಾಡಿದ್ದಾರೆ.

ಭಾನುವಾರ (ಮಾರ್ಚ್ 23) ಮುಂಬೈನ ಹ್ಯಾಬಿಟೇಟ್ ಕಾಮಿಡಿ ಕ್ಲಬ್‌ನಲ್ಲಿ ಕಾರ್ಯಕ್ರಮ ನೀಡುವ ವೇಳೆ ಕುನಾಲ್, ಶಿಂಧೆ ಅವರನ್ನು ದೇಶದ್ರೋಹಿ ಎಂದು ಕರೆದಿದ್ದರು. ಜೊತೆಗೆ ಆ ವಿಡಿಯೊ ತುಣಕನ್ನು ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದರು. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ರೊಚ್ಚಿಗೆದ್ದ ಶಿವಸೇನಾ ಕಾರ್ಯಕರ್ತರು ಕಮ್ರಾ ಅವರಿಗೆ ಬೆದರಿಕೆ ಹಾಕಿ, ಅವರು ಪ್ರದರ್ಶನ ನೀಡಿದ್ದ ಕಾಮಿಡಿ ಕ್ಲಬ್‌ಗೆ ದಾಳಿ ಮಾಡಿ ಸ್ಟುಡಿಯೊವನ್ನು ಧ್ವಂಸ ಮಾಡಿದ್ದಾರೆ.

ಅಲ್ಲದೇ ಈ ಕಾರ್ಯಕ್ರಮದಲ್ಲಿ ಕಮ್ರಾ ಮಹಾರಾಷ್ಟ್ರ ವಿಭಜನೆಯ ಕುರಿತು ಅಪಹಾಸ್ಯ ಮಾಡಿದ್ದರು. ಥಾಣೆಯಲ್ಲಿ ಗದ್...