ಭಾರತ, ಫೆಬ್ರವರಿ 23 -- ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ಭಾನುವಾರ (ಫೆ 23) ನಡೆದ ಪಾಕಿಸ್ತಾನ ವಿರುದ್ಧದ ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ 2025ರ ಗ್ರೂಪ್ ಎ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಏಕದಿನ ಪಂದ್ಯಗಳಲ್ಲಿ ವೇಗವಾಗಿ 9000 ರನ್ ಗಳಿಸಿದ ಆರಂಭಿಕ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 37ರ ಹರೆಯದ ಆಟಗಾರ ಪಂದ್ಯದ ಮೊದಲ ರನ್ ಗಳಿಸಿದಾಗ ಈ ಸಾಧನೆ ಮಾಡಿದ್ದಾರೆ.

ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ 9000 ರನ್ ಪೂರೈಸಿದ 6ನೇ ಆಟಗಾರ ಎಂಬ ಹಿರಿಮೆಗೂ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಸಚಿನ್ ತೆಂಡೂಲ್ಕರ್ (15310), ಸನತ್ ಜಯಸೂರ್ಯ (12740), ಕ್ರಿಸ್ ಗೇಲ್ (10179), ಆಡಮ್ ಗಿಲ್​ಕ್ರಿಸ್ಟ್ (9200) ಮತ್ತು ಸೌರವ್ ಗಂಗೂಲಿ (9146) ಇರುವ ಎಲೈಟ್ ಕ್ಲಬ್​​ನಲ್ಲಿ ಸ್ಥಾನ ಪಡೆದಿದ್ದಾರೆ.

ಆದಾಗ್ಯೂ, ರೋಹಿತ್ ಶರ್ಮಾ ಈ ಎಲ್ಲಾ ಬ್ಯಾಟರ್​ಗಳನ್ನು ಹಿಂದಿಕ್ಕಿ ವೇಗವಾಗಿ ಈ ಮೈಲಿಗಲ್ಲನ್ನು ತಲುಪಿದ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು 9000 ರನ್ ಗಡಿ ದಾಟಲು 18...