ಭಾರತ, ಫೆಬ್ರವರಿ 24 -- Toxic Movie: ರಾಕಿಂಗ್‌ ಸ್ಟಾರ್‌ ಯಶ್‌ ನಾಯಕನಾಗಿ ನಟಿಸುತ್ತಿರುವ ಟಾಕ್ಸಿಕ್‌ ಸಿನಿಮಾ ಈಗಾಗಲೇ ಶೂಟಿಂಗ್‌ ಹಂತದಲ್ಲಿದೆ. ಮಲಯಾಳಿ ನಿರ್ದೇಶಕಿ ಗೀತು ಮೋಹನ್‌ದಾಸ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ, ಕೇವಲ ಪ್ಯಾನ್‌ ಇಂಡಿಯಾ ಮಾತ್ರವಲ್ಲದೆ, ಪ್ಯಾನ್‌ ವರ್ಲ್ಡ್‌ ಚಿತ್ರವಾಗಿ ಸಿದ್ಧವಾಗುತ್ತಿದೆ. ಇತ್ತೀಚೆಗಷ್ಟೇ ಯಶ್‌ ಬರ್ತ್‌ಡೇಗೆ ಸಣ್ಣ ಝಲಕ್‌ ರಿಲೀಸ್‌ ಮಾಡಿದ್ದ ಚಿತ್ರತಂಡ, ಮೇಕಿಂಗ್‌ ಮೂಲಕವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇಂತಿಪ್ಪ ಸಿನಿಮಾ ತಂಡದಿಂದ ಇದೀಗ ಇನ್ನೊಂದು ಬಿಗ್‌ ಅಪ್‌ಡೇಟ್‌ ಹೊರಬಿದ್ದಿದೆ. ಅದೇನೆಂದರೆ, ಟಾಕ್ಸಿಕ್‌ ಸಿನಿಮಾ ಕನ್ನಡದ ಜತೆಗೆ ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಳ್ಳುತ್ತಿದೆ!

ಇಂಥ ಮೆಗಾ ಪ್ರಾಜೆಕ್ಟ್‌ ಅನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್‌ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ವೆಂಕಟ್ ನಾರಾಯಣ್‌ ಮತ್ತು ಯಶ್‌ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಗೀತು ಮೋಹನ್‌ದಾಸ್‌ ಈ ಸಿನಿಮಾ ಮೂಲಕ ಜಾಗತಿಕ ಪ್ರೇಕ್ಷಕರನ್ನು ಭಾರ...