Bengaluru, ಫೆಬ್ರವರಿ 10 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಫೆಬ್ರುವರಿ 7ರ ಸಂಚಿಕೆಯಲ್ಲಿ ಸೊಸೆ ಮತ್ತು ಮಗನ ಕೋರಿಕೆ ಮೇರೆಗೆ ಜವರೇಗೌಡ್ರು ಕೇಸ್ ಸಂಬಂಧವಾಗಿ ಎಸ್‌ಪಿಯವರನ್ನು ಮನೆಗೆ ಕರೆಸಿದ್ದಾರೆ. ಆದಷ್ಟು ಬೇಗ ಈ ಪ್ರಕರಣದ ತನಿಖೆ ಆಗಬೇಕು. ತನಿಖೆ ನಡೆಸಿ, ಯಾರು ತಪ್ಪಿತಸ್ಥರು ಎನ್ನುವುದನ್ನು ಪತ್ತೆಹಚ್ಚಬೇಕು ಎಂದು ಹೇಳುತ್ತಾರೆ. ಈ ಸುದ್ದಿ ಕೇಳಿ ಭಾವನಾಗೆ ಖುಷಿಯಾಗುತ್ತದೆ. ಆದರೆ ಸಿದ್ದೇಗೌಡರಿಗೆ ಮನಸ್ಸಿನಲ್ಲೇ ಕಸಿವಿಸಿಯಾಗುತ್ತದೆ. ಆದರೂ ಟೆನ್ಶನ್ ಆಗಿರುವುದನ್ನು ತೋರಿಸದೆ, ಮನೆಯಿಂದ ಹೊರಗೆ ಹೋಗುತ್ತಾನೆ.

ಮತ್ತೊಂದೆಡೆ, ಲಕ್ಷ್ಮೀ ಮನೆಯಲ್ಲಿ ಚಿಂತೆ ಮಾಡುತ್ತಾ ಕುಳಿತಿದ್ದಾಳೆ, ಅಲ್ಲಿಗೆ ಸೊಸೆ, ವೀಣಾ ಬರುತ್ತಾಳೆ, ಅಯ್ಯೋ ಅತ್ತೆ, ಯಾಕೆ ಇಷ್ಟೊಂದು ಚಿಂತೆ ಮಾಡುತ್ತೀದ್ದೀರಿ, ಎಲ್ಲವೂ ಸರಿಯಾಗುತ್ತದೆ, ಚಿಂತಿಸಬೇಡಿ ಎನ್ನುತ್ತಾಳೆ. ಒಳಗಡೆ ಹೋಗಿ, ಸಂತೋಷ್‌ಗೆ ನೀವು ಯಾವತ್ತೂ ಹಣ ಹಣ ಎನ್ನುತ್ತೀರಿ, ಸ್ವಲ್ಪ ಅತ್ತೆ ಮಾವನ ಆರೋಗ್ಯದ ಕಡೆಗೂ ಗಮನ ಹರಿಸಿ ಎನ್ನುತ್ತಾಳೆ. ಅ...