Bengaluru, ಮಾರ್ಚ್ 21 -- Karnataka SSLC Exam: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದು (ಮಾರ್ಚ್ 21) ಶುರುವಾಗಿದ್ದು, ಮೊದಲ ದಿನ ಪ್ರಥಮ ಭಾಷೆಯ ಪರೀಕ್ಷೆ ಬೆಳಿಗ್ಗೆ 10 ಗಂಟೆಯಿಂದ ಅಪರಾಹ್ನ 1.15ರ ತನಕ ನಡೆಯಿತು. ಈ ಪೈಕಿ ಇಂಗ್ಲಿಷ್ ಭಾಷಾ ಪರೀಕ್ಷೆ ಬಗ್ಗೆ ಕೆಲವು ವಿದ್ಯಾರ್ಥಿಗಳು ಮತ್ತು ಪಾಲಕರು ಪ್ರತಿಕ್ರಿಯಿಸಿದ್ದು, ಪರೀಕ್ಷೆ ಹೇಗಿತ್ತು ಎಂಬ ವಿವರ ಹಂಚಿಕೊಂಡಿದ್ದಾರೆ. ಪ್ರಶ್ನೆ ಪತ್ರಿಕೆ ತುಂಬ ಸರಳವಾಗಿದ್ದ ಕಾರಣ, ಸರಿಯಾಗಿ ಓದಿಕೊಂಡು ಹೋಗಿದ್ದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿಲ್ಲ. ಸಾಧಾರಣ ಕಲಿಕಾ ಸಾಮರ್ಥ್ಯದ ವಿದ್ಯಾರ್ಥಿಗಳೂ ಸುಲಭವಾಗಿ ಅರ್ಥಮಾಡಿಕೊಳ್ಳುವಂತೆಯೇ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಇತ್ತು ಎಂದು ಕೆಲವು ಶಿಕ್ಷಕರು ಹೇಳಿಕೊಂಡಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಮೊದಲು ಯಾರೆಲ್ಲ ಕಳೆದ ಮೂರು ವರ್ಷಗಳ ಪ್ರಶ್ನೆ ಪತ್ರಿಕೆ ಅಭ್ಯಾಸ ಮಾಡಿದ್ದರೋ ಅವರಿಗೆ ಪ್ರಥಮ ಭಾಷೆ ಇಂಗ್ಲಿಷ್ ಪರೀಕ್ಷೆ ಸುಲಭವಾಗಿದ್ದೀತು. ಬಹುತೇಕ ಪ್ರಶ್ನೆಗಳು ಕಳೆದ 3 ವರ್ಷಗಳ ಪ್ರಶ್ನೆಪತ್ರಿಕೆಗಳಲ್ಲಿ ಬಂದಿರ...