ಭಾರತ, ಮೇ 4 -- ಏರೋಸ್ಪೇಸ್ ಎಂಜಿನಿಯರ್: ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದಿದ್ದು, 22 ವಿದ್ಯಾರ್ಥಿಗಳು ಪೂರ್ಣಾಂಕ ಅಂದರೆ 625ಕ್ಕೆ 625 ಅಂಕ ಗಳಿಸಿದ ಸಾಧನೆ ಮಾಡಿದ್ದಾರೆ. ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ಬಹುತೇಕ ವಿದ್ಯಾರ್ಥಿಗಳಿಗೆ ತಮ್ಮದೇ ಆದ ಕನಸುಗಳಿವೆ. ಕೆಲವು ವೈದ್ಯರಾಗಬೇಕು, ಇನ್ನು ಕೆಲವರು ಎಂಜಿನಿಯರ್ ಆಗಬೇಕು. ಹೀಗೆ ತಮ್ಮದೇ ಆದ ಕನಸುಗಳನ್ನು ನನಸು ಮಾಡುವ ಪ್ರಯತ್ನಕ್ಕೆ ಮುಂದಾಗಿದ್ಧಾರೆ. ಈ ಪೈಕಿ ಚಿತ್ರದುರ್ಗದ ಹಿರಿಯೂರು ರಾಷ್ಟ್ರೀಯ ಅಕಾಡೆಮಿ ಸ್ಕೂಲ್‌ನ ವಿದ್ಯಾರ್ಥಿ ನಂದನ್‌ ಸುದ್ದಿಗಾರರ ಜತೆಗೆ ಮಾತನಾಡುತ್ತ, ತನಗೆ ಏರೋಸ್ಪೇಸ್ ಎಂಜಿನಿಯರ್ ಆಗಬೇಕು ಎಂಬ ಕನಸನ್ನು ಹಂಚಿಕೊಂಡಿದ್ದರು. 10ನೇ ತರಗತಿ ಮುಗಿದಿದೆ. ಪಿಯುಸಿ ಅಥವಾ 11ನೇ ತರಗತಿಗೆ ಸೇರ್ಪಡೆಯಾಗುವ ಹೊತ್ತು. ಏರೋಸ್ಪೇಸ್ ಎಂಜಿನಿಯರ್ ಆಗಬೇಕೆಂದರೆ ಯಾವ ಕೋರ್ಸ್ ತೆಗೆದುಕೊರ್ಳಳಬೇಕು, ಯಾವ ವಿಷಯ ಓದಬೇಕು ಎಂಬಿತ್ಯಾದಿ ಕುತೂಹಲದ ಪ್ರಶ್ನೆಗಳು ಕಾಡುವುದು ಸಹಜ.

ಏರೋಸ್ಪೇಸ್ ಎಂಜಿನಿಯರಿಂಗ್ ಎಂಬುದು ವಿಜ್ಞಾನಕ್ಕೆ ಸಂಬಂಧಿಸಿದ ಕ್ಷೇತ್ರ. 1...